ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

4 ಲಕ್ಷ ಮೌಲ್ಯದ ಬೀಟೆ ವಶ

Lingaraj Badiger
Updated On : 13 Sept 2013, 11:03 am

ಶಿವಮೊಗ್ಗ: ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪೋಲೀಸ್ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಚರಣೆ ನಡೆಸಿ ಸುಮಾರು 4 ಲಕ್ಷ ರುಪಾಯಿ ಮೌಲ್ಯದ ಬೀಟೆ ನಾಟಾ ವಶಪಡಿಸಿಕೊಂಡ ಪ್ರಕರಣ ಗುರುವಾರ ಚೋರಡಿ ವಲಯ ಅರಣ್ಯ ವ್ಯಾಪ್ತಿಯ ಶಿಕಾರಿಪುರ ತಾಲೂಕು ಈಸೂರು ಗ್ರಾಮದ ತುಂಬುಹೊಂಡದ ಸಾಬರ ಬೀದಿಯಲ್ಲಿ ನಡೆದಿದೆ.
ಸಾಂಗ್ಲಿಯಾನ ಅವರು ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದಾಗ ಸುಮಾರು ಮೂರು ದಶಕಗಳ ಹಿಂದೆ ನಡೆದ ದಾಳಿಯ ನಂತರ ಈಸೂರಿನಲ್ಲಿ ನಡೆದ ಯಶಸ್ವಿ ದಾಳಿ ಇದಾಗಿದ್ದು, ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಖಚಿತ ಸುಳಿವನ್ನು ಅಧರಿಸಿ ನಡೆಸಿದ ದಾಳಿ ಇದಾಗಿದೆ.
4 ಲಕ್ಷ ಮೌಲ್ಯ: ಕಾರ್ಯಾಚರಣೆಯಲ್ಲಿ ಮನೆಯ ಹಿಂಭಾಗದ ಕಸದ ತೊಟ್ಟಿ ಮತ್ತು ಗೊಬ್ಬರ ಗುಂಡಿಗಳಲ್ಲಿ ಅವಿತಿಟಿದ್ದ 14 ಬೀಟೆ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 100 ಅಡಿ ವಿಸ್ತೀರ್ಣದ ನಾಟಾ ಇದಾಗಿದೆ. ಇದರ ಮೌಲ್ಯ 4 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಗವಟೂರು ಪುರುಷೋತ್ತಮ ಮತ್ತು ಸೀತಾರಾಮ ಎಂಬವರು ತಲೆ ಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ನಾಟಾ ಸಾಗಣೆಗೆ ಬಳಸಿದ ವಾಹನ (ಕ್ಯಾಂಟರ್) ಸಹಿತ ಆರೋಪಿಗಳು ಪರಾರಿಯಾಗಿದ್ದಾರೆ.
ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್, ಶಿವಮೊಗ್ಗ ಜಿಲ್ಲಾ  ಎಸ್.ಪಿ. ಕೌಶಲೇಂದ್ರಕುಮಾರ್, ಸಾಗರ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಟಿ.ಜೆ. ರವಿಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ ಗಂಗೊಳ್ಳಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಚೋರಡಿ ವಲಯ ಅರಣ್ಯಾಧಿಕಾರಿ ಕೆ. ರವಿ, ಹಣಗೆರೆ ವಲಯ ವನ್ಯ ಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಗೋಪಾಲ್, ಅಂಬ್ಲಿಗೊಳ ವಲಯ ಅರಣ್ಯಾಧಿಕಾರಿ ರಾಮಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಮಾದಪ್ಪ ಮತ್ತಿತರರು ನೇತೃತ್ವ ವಹಿಸಿದ್ದರು.
ಚೋರಡಿ ವಲಯದ ಅರಣ್ಯ ಸಿಬ್ಬಂದಿ ಉಪವಲಯ ಅರಣ್ಯಾಧಿಕಾರಿ ಜೇಂದ್ರ ನಾಯಕ, ಮಹೇಶ್, ನದಾಫ್, ರಾಘವೇಂದ್ರ ತಗ್ಗಿನ, ಶಿವರಾಜ ಪದಕಿ, ಅಶೋಕ, ಸುರೇಶ, ಶೇಖರ್, ನರಸಿಂಹ, ವೀಕ್ಷಕ ಚಂದ್ರ ಶೆಟ್ಟಿ, ಚಾಲಕ ರಫಿಕ್, ಹೆಣಗೆರೆ ವಲಯ ಅರಣ್ಯ ವಿಭಾಗದ ಸಿಬ್ಬಂದಿ ರಾಘವೇಂದ್ರ, ಹನುಂತಪ್ಪ, ಚಾಲಕ ನಾಗರಾಜ್, ಶಿಕಾರಿಪುರ ವಲಯ ಅರಣ್ಯ ವಿಭಾಗದ ರವೀಂದ್ರ, ಸತೀಶ, ಚಾಲಕ ಮುನ್ನ, ಅರಣ್ಯ ಸ್ಕ್ವಾಡ್ ರಾಮಪ್ಪ, ವೆಂಕಟರಮಣ ಕರಣಿಕ, ರಮೇಶ, ಅಂಬ್ಲಿಗೊಳ ಅರಣ್ಯ ವಿಭಾಗದ ಅವಿನಾಶ, ಅಶೋಕ, ಚಾಲಕ ನಾಗರಾಜ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಾಚರಣೆಗೆ ಈಸೂರು ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿ ಘಟನೆಯನ್ನು ಖಂಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement