ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಏಕಲವ್ಯ ಪ್ರಶಸ್ತಿಯಿಂದ ಚೆಸ್ ಪ್ರತ್ಯೇಕ; ಖಂಡನೆ

Vishwanath S
Updated On : 14 Sept 2013, 12:30 pm

ಭದ್ರಾವತಿ: ಕರ್ನಾಟಕ ಈವರೆಗೆ ಚೆಸ್ ಪಂದ್ಯದಲ್ಲಿ ಮೂವರು ಅಂತಾರಾಷ್ಟ್ರೀಯ ಮಾಸ್ಟರ್ ಆಟಗಾರರನ್ನು ಕೊಡುಗೆಯಾಗಿ ನೀಡಿದ್ದು, ಇವರಲ್ಲಿ ಇಬ್ಬರಿಗೆ ಈಗಾಗಲೇ ಏಕಲವ್ಯ ಪ್ರಶಸ್ತಿ ಲಭಿಸಿದ್ದು, ಮೂರನೇ ಆಟಗಾರ ಶಿವಮೊಗ್ಗ ಜಿಲ್ಲೆಯ ಸಾಗರದ ಬಿ.ಎಸ್. ಶಿವಾನಂದ ಅವರಿಗೆ ಏಕಲವ್ಯ ಪ್ರಶಸ್ತಿ ನೀಡುವಲ್ಲಿ ಸರ್ಕಾರ ಚೆಸ್ ಆಟವನ್ನು ಏಕಲವ್ಯ ಪ್ರಶಸ್ತಿಯಿಂದ ಪ್ರತ್ಯೇಕಿಸಿರುವುದು ಸರಿಯಲ್ಲವೆಂದು ಭದ್ರಾವತಿ ತಾಲೂಕು ಚೆಸ್ ಸಂಸ್ಥೆ ಟೀಕಿಸಿದೆ.
 ಚದುರಂಗದಾಟ ಭಾರತದಲ್ಲಿ ಅತ್ಯಂತ ಪ್ರಾಚೀನ ಕ್ರೀಡೆಯಾಗಿದೆ. ಕಳೆದ ವರ್ಷದಿಂದ ಕರ್ನಾಟಕ ಸರ್ಕಾರ ನವಂಬರ್ 30ನ್ನು ಚದುರಂಗ ದಿನವನ್ನಾಗಿ ಘೋಷಿಸಿದೆ. ಆದರೆ ಈ ಬಾರಿ ಸರ್ಕಾರ ರಾಜ್ಯದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಏಕಲವ್ಯ ಪ್ರಶಸ್ತಿಯನ್ನು ನೀಡುವಲ್ಲಿ ಚದುರಂಗದಾಟವನ್ನು ಪ್ರಶಸ್ತಿಯ ವ್ಯಾಪ್ತಿಯಿಂದ ಹೊರತುಪಡಿಸಿ ಅದನ್ನು ಗ್ರಾಮೀಣ ಕ್ರೀಡೆ ಎಂದು ಘೋಷಿಸಲು ಹೊರಟಿರುವುದು ಅತೃಪ್ತಕರ ವಿಷಯವಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 ಮುಖ್ಯಮಂತ್ರಿಗಳು, ಕ್ರೀಡಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪ್ರಜಾಪ್ರತಿನಿಧಿಗಳು ಏಕಲವ್ಯ ಪ್ರಶಸ್ತಿ ನೀಡುವ ಪ್ರಕ್ರಿಯೆಯಲ್ಲಿ ನಡೆದಿರುವ ಅನ್ಯಾಯವನ್ನು ಸರಿಪಡಿಸಿ ಅರ್ಹ ಕ್ರೀಡಾಪಟು ಅಂತಾರಾಷ್ಟ್ರೀಯ ಮಾಸ್ಟರ್ ಬಿ.ಎಸ್. ಶಿವಾನಂದ ಅವರಿಗೆ ಏಕಲವ್ಯ ಪ್ರಶಸ್ತಿ ಕೊಡಿಸಿ ಗೌರವಿಸಬೇಕೆಂದು ಭದ್ರಾವತಿ ತಾಲೂಕು ಚೆಸ್ ಸಂಸ್ಥೆಯ ಅಧ್ಯಕ್ಷ ಎಸ್.ಜಿ. ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆರ್. ಉಮೇಶ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement