ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಟ್ಟಡ ಕಾಮಗಾರಿ ವಿಳಂಬ: ಆರೋಪ

Vishwanath S
Updated On : 14 Sept 2013, 12:31 pm

ಸೊರಬ: ತಾಲೂಕಿನ ಆನವಟ್ಟಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿ ವಿಳಂಬದ ಕುರಿತು ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ.
ಕಟ್ಟಡ ಆರಂಭಗೊಂಡು ಉದ್ಘಾಟನೆಯೂ ಆಗಿ 2 ವರ್ಷ ದಾಟಿದೆ, ಹೆಸರಿಗೆ ಕಾಲೇಜಿದೆ, ಉಪಯೋಗಕ್ಕೆ ಮಾತ್ರವಿಲ್ಲ. ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರು.ವಿನಿಯೋಗಿಸಿದ್ದರೂ ಬೋಧನೆಗೆ ಪೂರಕವಾದ ಸೌಲಭ್ಯಗಳಿನ್ನೂ ಸಮರ್ಪಕವಾಗಿ ಒದಗಿಸಿಲ್ಲ. ವಿಜ್ಞಾನ ವಿಭಾಗಕ್ಕಾಗಿ ಕಟ್ಟಡವಿದೆಯಾದರೂ ವಿಜ್ಞಾನ ವಿಷಯವೆ ಇಲ್ಲ. ಈ ಕಟ್ಟಡಗಳಲ್ಲಿ ಬೋಧನೆ ನಡೆಯುತ್ತಿಲ್ಲ, ಹಾಗಾಗಿ ಇರುವ ಕಲಾ, ವಾಣಿಜ್ಯ ತರಗತಿಗಳು ಒಂದೆ ಕಟ್ಟಡದಲ್ಲಿ ಪಾಳಿಯ ಮೇಲೆ ತರಗತಿ ನಡೆಸಬೇಕಿದೆ. ಸರ್ಕಾರ ಕೋಟ್ಯಂತರ ರು.ವೆಚ್ಚ ಭರಿಸಿ ನಿರ್ಮಾಣವಾದ ನಂತರ ಉದ್ಘಾಟನೆಗೆ ತೋರುವ ಆಸಕ್ತಿಯನ್ನು ಶಾಲಾ, ಕಾಲೇಜು ಅಭಿವೃದ್ಧಿಯತ್ತ ಮುಂದಾಗುವುದಿಲ್ಲ ಎಂದು ಆರೋಪಿಸಿರುವ ಅವರು, ಕಾಲೇಜು ಕಟ್ಟಡದ ಸಮರ್ಪಕ ನಿರ್ವಹಣೆ ಇಲ್ಲದೆ, ಕಿಟಕಿ ಗಾಜುಗಳು ಒಡೆದಿವೆ, ನೀರು ಸಂಗ್ರಹಣಾ ಟ್ಯಾಂಕ್ ಕಳುವಾಗಿದೆ.
  ಶೌಚಾಲಯ ಸ್ವಚ್ಛತೆ ಇಲ್ಲ, ಆವರಣ ಸ್ವಚ್ಛತೆ ಇಲ್ಲ, ಪುಸ್ತಕಗಳಿದ್ದರೂ ಕುಳಿತು ಓದುವ ವ್ಯವಸ್ಥಿತ ಲೈಬ್ರರಿ ಇಲ್ಲ. ಕೆಲ ವಿಷಯಗಳಿಗೆ ಪೂರ್ಣಾವಧಿ ಬೋಧಕರಿಲ್ಲ, ಕಚೇರಿ ನಿರ್ವಹಣಾ ಸಿಬ್ಬಂದಿ ಇಲ್ಲ ಎಂದು ಆಕ್ಷೇಪಿಸಿದ್ದಾರೆ.
 ವಿಜ್ಞಾನ ವಿಭಾಗ ಇಲ್ಲದಿರುವುದರಿಂದ ವಿಜ್ಞಾನದಲ್ಲಿ ಪಿಯೂ ಮುಗಿಸಿರುವ ವಿದ್ಯಾರ್ಥಿಗಳು ಪಕ್ಕದ ತಾಲೂಕಿನ ಕಾಲೇಜಿಗೆ ಹೋಗುವ ಪರಿಸ್ಥಿತಿ ಬಂದಿದೆ.  ಸ್ಥಳೀಯ ಶಾಸಕರು ಇಲ್ಲಿನ ಉತ್ತಮ ವಾತಾವರಣ ನಿರ್ಮಾಣಕ್ಕೆ ಮುಂದಾಗಲಿ ಎಂದು ಎಬಿವಿಪಿಯ ಆನಂದ, ಕಿಶೋರ, ಹರೀಶ, ಮಾಲತೇಶ, ಆಸಿಫ್, ಮದನ್, ನವೀನ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement