ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

13 ಕದನ ಕಲಿಗಳವೃತ್ತಿ, ಸಾಧನೆ

Vishwanath S
Updated On : 2 Apr 2014, 11:37 am

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಿರುವ 13 ಅಭ್ಯರ್ಥಿಗಳ ವಿಶೇಷವೇನು ಅವರ ಸಾಧನೆ, ವೃತ್ತಿ ಏನು ಅವರು ಏನು ಓದಿದ್ದಾರೆ ವಯಸ್ಸೆಷ್ಟು ಅವರನ್ನು ಹೇಗೆ ಸಂಪರ್ಕಿಸಬಹುದು ನಮ್ಮೂರಿನವರೆಷ್ಟು, ಹೊರಗಿನವರೆಷ್ಟು ಇವನ್ನೆಲ್ಲಾ ತಿಳಿದುಕೊಳ್ಳುವ ಕುತೂಹಲವಿದೆಯೇ- ನೋಡಿ, ಇಲ್ಲಿದೆ ವಿವರ.
ಭಾರಿ ಪ್ರಚಾರದ ಪ್ರಮುಖ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರಿಚಯವೇನೂ ಮತದಾರರಿಗೆ ಇದೆ. ಅದರೆ ಉಳಿದವರು ಯಾರು. ಅವರ ಪರಿಚಯ ಹಾಗೂ ವಿಶ್ಲೇಷಣಾತ್ಮಕ ನೋಟ ಅತ್ಯಂತ ಕುತೂಹಲಕರ.
ಇವರ ಮತವೇ ಇವರಿಗಿಲ್ಲ:  ಕಣದಲ್ಲಿರುವ 13 ಅಭ್ಯರ್ಥಿಗಳಲ್ಲಿ ಮೂವರು ಹೊರಗಿನವರು. ರಾಜಕೀಯ ಅರ್ಥದಲ್ಲಿ ಅಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಾವುದೇ ಮತಗಟ್ಟೆಯಲ್ಲಿ ಇವರು ಮತದಾರರಲ್ಲ. ಇವರಿಗೆ ತಮ್ಮ ಮತವನ್ನೂ ಸಹ ತಮಗೆ ಚಲಾಯಿಸಿಕೊಳ್ಳಲು ಅವಕಾಶವಿಲ್ಲ.
ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಬೆಂಗಳೂರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಬೇಕು. ಪಕ್ಷೇತರ ಅಭ್ಯರ್ಥಿ ಎಚ್. ಸುರೇಶ್ ಪೂಜಾರಿ ಅವರ ಮತವೂ ಸಹ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿದೆ. ಎಸ್. ಸತೀಶ್ ಸಾಲಿಯಾನ ಅವರ ಮತವಿರುವ ಕ್ಷೇತ್ರ ಉಡುಪಿ ಜಿಲ್ಲೆಯ ಮೂಡಬಿದ್ರಿ.
ಉಳಿದಂತೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ಹೆಚ್ಚು ಸ್ಪರ್ಧಿಗಳು ಕಣದಲ್ಲಿದ್ದಾರೆ. ಪಕ್ಷೇತರರಾದ ಮಹಮದ್ ಫಯಾಜ್ ಅಹಮದ್, ಶ್ರೀಲತಾ ಶೆಟ್ಟಿ, ಎಂ.ಆರ್. ಅನಿಲ್, ಎಂ.ಎಸ್. ಮೊಯಿನುದ್ದೀನ್, ಕುಣಜೆ ಮಂಜುನಾಥ ಗೌಡ ಈ ಕ್ಷೇತ್ರದವರು. ಶಿಕಾರಿಪುರ ಕ್ಷೇತ್ರದ ಬಿ.ಎಸ್. ಯಡಿಯೂರಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಂಜುನಾಥ ಭಂಡಾರಿ, ತೀರ್ಥಹಳ್ಳಿ ಕ್ಷೇತ್ರದ ಶ್ರೀಧರ ಕಲ್ಲಹಳ್ಳ, ಸಾಗರ ಕ್ಷೇತ್ರ ಬಿ. ಧರ್ಮಪ್ಪ, ಭದ್ರಾವತಿ ಕ್ಷೇತ್ರದ ಬಿ.ಕೆ. ಶಶಿಕುಮಾರ್ ಕಣದಲ್ಲಿದ್ದಾರೆ.
ಧರ್ಮಪ್ಪರೇ ಹಿರಿಯಣ್ಣ:  ಕಣದಲ್ಲಿರುವ 13 ಅಭ್ಯರ್ಥಿಗಳಲ್ಲಿ ಹಿರಿಯ ಅಭ್ಯರ್ಥಿ ಎಂದರೆ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿರುವ ಸಾಗರ ಕ್ಷೇತ್ರದ ಮಾಜಿ ಶಾಸಕ ಬಿ. ಧರ್ಮಪ್ಪ. ಅವರಿಗೆ 77 ವರ್ಷ. ನಂತರದ ಸ್ಥಾನದಲ್ಲಿ 71 ವರ್ಷದ ಯಡಿಯೂರಪ್ಪ ಇದ್ದಾರೆ. ಕರುನಾಡು ಪಾರ್ಟಿಯಿಂದ ಸ್ಫರ್ಧಿಸಿರುವ ಬಿ.ಕೆ. ಶಶಿಕುಮಾರ್ ಗೆ ಕೇವಲ 31 ವರ್ಷ. ಇವರೇ ಕಿರಿಯ ಅಭ್ಯರ್ಥಿ
ಉಳಿದವರ ವಯೋವಾನ ಇಂತಿದೆ. ಗೀತಾ ಶಿವರಾಜಕುಮಾರ್- 49, ಮಂಜುನಾಥ ಭಂಡಾರಿ- 52, ಶ್ರೀಧರ ಕಲ್ಲಹಳ್ಳ- 49, ಕುಣಜೆ ಮಂಜುನಾಥ ಗೌಡ- 43, ಮಹಮದ್ ಫಯಾಜ್ ಅಹಮದ್- 46, ಶ್ರೀಲತಾ ಶೆಟ್ಟಿ- 41, ಎಂ.ಆರ್. ಅನಿಲ್- 33, ಎಚ್. ಸುರೇಶ್ ಪೂಜಾರಿ- 42, ಎಸ್. ಸತೀಶ್ ಸಾಲಿಯಾನ- 46, ಎಂ.ಎಸ್. ಮೊಯಿನುದ್ದೀನ್- 40.
ಬಡವ ಶಶಿ: ಶಿವಮೊಗ್ಗ ಕಣದಲ್ಲಿರುವ ಅತ್ಯಂತ ಬಡವ ಅಭ್ಯರ್ಥಿ ಎಂದರೆ ಕರುನಾಡು ಪಾರ್ಟಿಯಿಂದ ಸ್ಪರ್ಧಿಸಿರುವ ಶಶಿಕುಮಾರ್. ಕೂಲಿ ವೃತ್ತಿಯ ಇವರ ಬಳಿ ಯಾವುದೇ ಚರಾಸ್ತಿಯಾಗಲಿ, ಸ್ಥಿರಾಸ್ತಿಯಾಗಲಿ, ಸಾಲವಾಗಲಿ ಇಲ್ಲ. ಕೈಯಲ್ಲಿ 50 ಸಾವಿರ ರು. ನಗದು ಇದ್ದರೆ, ಬ್ಯಾಂಕಿನಲ್ಲಿ 1 ಸಾವಿರ ಠೇವಣಿ ಇದೆ. ಪತ್ನಿ 10 ಸಾವಿರ ರು. ನಗದು ಕೈಲಿಟ್ಟುಕೊಂಡಿದ್ದಾರೆ.
ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂದರೆ ಕಾಂಗ್ರೆಸ್ ಪಕ್ಷದ ಮಂಜುನಾಥ ಭಂಡಾರಿ. ಪತಿ-ಪತ್ನಿ ಸೇರಿ ಸುಮಾರು 25 ಕೋಟಿ ರು. ಮೌಲ್ಯದ ಆಸ್ತಿ ಇದೆ.
ವೃತ್ತಿ ನೋಡಿದರೆ ಗೀತಾ ಚಲನಚಿತ್ರ ನಿರ್ಮಾಪಕರು. ಶ್ರೀಧರ ಕಲ್ಲಹಳ್ಳ ಅವರು ಕೃಷಿಕ ಹಾಗೂ ಆರ್ಕಿಟೆಕ್ಟ್. ಬಿ. ಧರ್ಮಪ್ಪ ವಕೀಲರು. ಕುಣಜೆ ಮಂಜುನಾಥ ಗೌಡ ಅವರು ಹಣಗೆರೆಕಟ್ಟೆಯಲ್ಲಿ ಸ್ಟುಡಿಯೋ ಹೊಂದಿದ್ದಾರೆ. ಮಹಮದ್ ಫಯಾಜ್ ಅಹಮದ್ ಹಾಗೂ ಎಂ.ಎಸ್. ಮೊಯಿನುದ್ದೀನ್ ಅವರ ವೃತ್ತಿ ವ್ಯಾಪಾರ. ಶ್ರೀಲತಾ ಶೆಟ್ಟಿ ಅವರು ಪೇಯಿಂಗ್ ಗೆಸ್ಟ್ ವ್ಯವಹಾರ ನಡೆಸುತ್ತಿದ್ದಾರೆ. ಎಂ.ಆರ್. ಅನಿಲ್ ಫೋಟೋಗ್ರಾಫರ್, ಜತೆಗೆ ಎಲ್‌ಐಸಿ ಏಜೆಂಟ್ ಸಹ. ಎಚ್. ಸುರೇಶ್ ಪೂಜಾರಿ ಸ್ವಯಂ ಉದ್ಯೋಗ ಮಾಡುತ್ತಾರೆ. ಎಸ್.ಸತೀಶ್ ಸಾಲಿಯಾನ ಅವರದು ದೋಬಿ ವೃತ್ತಿ.
ಬಿ.ಎಸ್.ಯಡಿಯೂರಪ್ಪ
(ಬಿಜೆಪಿ), ವಿಳಾಸ- ಶಿಕಾರಿಪುರ,
ದೂರವಾಣಿ: 08187 222777  222256.
ಗೀತಾ ಶಿವರಾಜಕುಮಾರ್
(ಜೆಡಿಎಸ್)
ವಿಳಾಸ: ಮನೆ ನಂ.18, ಮಾನ್ಯತಾ ಬಡಾವಣೆ, ರಾಚೇನಹಳ್ಳಿ, ನಾಗವಾರ ರಿಂಗ್ ರಸ್ತೆ, ಬೆಂಗಳೂರು- 560045.
ದೂರವಾಣಿ: 9900858888
ಮಂಜುನಾಥ ಭಂಡಾರಿ (ಕಾಂಗ್ರೆಸ್)ವಿಳಾಸ: ನಂ.1, ಭಂಡಾರಿ ಹೌಸ್, ಗಾಂಧಿನಗರ, ಶಿವಮೊಗ್ಗ.
9008077000, 276666.ಶ್ರೀಧರ ಕಲ್ಲಹಳ್ಳ (ಆಪ್)
ವಿಳಾಸ: ಅನುಶೃತ,
ಸೊಪ್ಪುಗುಡ್ಡೆ,
ತೀರ್ಥಹಳ್ಳಿ: 577432.
ದೂರವಾಣಿ:
959101 4464
ಬಿ.ಧರ್ಮಪ್ಪ, (ಜೆಡಿಯು)
ವಿಳಾಸ- ನಂ.2, ಗಾಂಧಿ ನಗರ, ಕೆಎಚ್ ಬಿ ಕಾಲೋನಿ, ಸಾಗರ- 577401. ದೂ. 9480023809.
ಕುಣಜೆ ಮಂಜುನಾಥ ಗೌಡ (ಬಹುಜನ ಸಮಾಜ ಪಕ್ಷ)
ವಿಳಾಸ: ಕುಣಜೆ, ಹಣಗೆರೆ ಅಂಚೆ, ತೀರ್ಥಹಳ್ಳಿ.
ದೂ:  934362399,
08181 214444
ಬಿ.ಕೆ.ಶಶಿಕುಮಾರ್
(ಕರುನಾಡು ಪಾರ್ಟಿ)
ವಿಳಾಸ: ಫಿಲ್ಟರ್ ಶೆಡ್, ಜನ್ನಾಪುರ, ಭದ್ರಾವತಿ. ದೂ: 8453868ಡ87
ಮಹಮದ್ ಫಯಾಜ್ ಅಹಮದ್ (ಸರ್ವ ಜನತಾ ಪಾರ್ಟಿ)
ವಿಳಾಸ: ಬೈತುಸ್ವಾಲೆಹಾ, ಸರ್ಕಾರಿ ಉರ್ದು ಶಾಲೆಯ ಸಮೀಪ, 2ನೇ ಕ್ರಾಸ್, ಸೂಳೆಬೈಲು, ಶಿವಮೊಗ್ಗ,
ದೂ: 9886991057.
ಶ್ರೀಲತಾ ಶೆಟ್ಟಿ (ಪಕ್ಷೇತರ)
ವಿಳಾಸ: ಗಣಪತಿ ದೇವಸ್ಥಾನದ ಹತ್ತಿರ, ಆಲ್ಕೊಳ, ಶಿವಮೊಗ್ಗ.
ದೂ: 9535480557.
ಎಂ.ಆರ್.ಅನಿಲ್
(ಪಕ್ಷೇತರ)
ವಿಳಾಸ: ಮಣಿಕಂಠ ನಿಲಯ, 1ನೇ ಕ್ರಾಸ್, ವೆಂಕಟೇಶ ನಗರ, ಶಿವಮೊಗ್ಗ.
ದೂರವಾಣಿ: 9880218253
ಎಚ್.ಸುರೇಶ್ ಪೂಜಾರಿ (ಪಕ್ಷೇತರ).
ವಿಳಾಸ: 9,
ಆರ್.ವಿ. ಶೆಟ್ಟಿ
ಲೇಔಟ್,
ಫ್ಲ್ಯಾಟ್ ಫಾರಂ ರೋಡ್,
1ನೇ ಕ್ರಾಸ್,
2ನೇ ಮೈನ್,
ಶೇಷಾದ್ರಿಪುರಂ,
ಬೆಂಗಳೂರು.
ಪ್ರಸ್ತುತ:
ಮನೆ ನಂ. 7-19, ಮಡಿಕಲ್,
ಉಪ್ಪುಂದ, ಕುಂದಾಪುರ ತಾಲೂಕು.
ದೂರವಾಣಿ-
96111 49125
ಎಸ್. ಸತೀಶ್ ಸಾಲಿಯಾನ
(ಪಕ್ಷೇತರ). ವಿಳಾಸ: 7-125, ಗೋಪಾಲಕೃಷ್ಣ ದೇವಸ್ಥಾನ ರಸ್ತೆ, ಮೂಡುಬಿದಿರೆ. 9901038638.
ಎಂ.ಎಸ್. ಮೊಯಿನುದ್ದೀನ್
(ಪಕ್ಷೇತರ)
ವಿಳಾಸ- 1ನೇ ತಿರುವು,
2ನೇ ಹಂತ, ವಿನೋಬ ನಗರ, ಶಿವಮೊಗ್ಗ,
ದೂರವಾಣಿ: 8971888160.
ಹೈಟೆಕ್ ಭಂಡಾರಿ, ಬಿಎಸ್‌ವೈ
ಅಂತರ್ಜಾಲ ತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಮುಂದಿದ್ದಾರೆ. ಇವರು ಇ-ಮೇಲ್ (mbsmg123gmail.com) ಫೇಸ್‌ಬುಕ್ (manjunath.bhandary.37facebook.com) ಹಾಗೂ ಟ್ವಿಟರ್ (ManjunathBhandatwitter.com, httpstwitter.com ManjunathBhanda) ಖಾತೆಯನ್ನೂ ಹೊಂದಿದ್ದಾರೆ. ಒಂದು ಪ್ರತ್ಯೇಕ ವೆಬ್‌ತಾಣವನ್ನೂ (httpwww.manjunathbhandary.in) ಹೊಂದಿದ್ದಾರೆ.
ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರೂ ಸಹ ವೆಬ್‌ತಾಣ ಹೊಂದಿದ್ದಾರೆ. httpyeddyurappa.in ಎಂಬುದು ಇವರ ಅಂತರ್ಜಾಲ ತಾಣದ ವಿಳಾಸ. ಇವರ ಇ ಮೇಲ್ infozyeddyurappa.in
ಆಮ್ ಆದ್ಮಿ ಪಕ್ಷದ ಶ್ರೀಧರ ಕಲ್ಲಹಳ್ಳ ಅವರ ಇ-ಮೇಲ್  kgsdhargmal.com ಹಾಗೂ ಫೇಸ್‌ಬುಕ್ ಖಾತೆ  httpswww.facebook.comkallahalla ಆಗಿದೆ.
ಜೆಡಿಎಸ್ ಪಕ್ಷದ ಗೀತಾ ಶಿವರಾಜಕುಮಾರ್ (geethashiv22gmail.com) ಇ -ಮೇಲ್ ವಿಳಾಸ ಹೊಂದಿದ್ದಾರೆ.
ಪಕ್ಷೇತರರಾದ ಶ್ರೀಲತಾ ಶೆಟ್ಟಿ ಇ -ಮೇಲ್ Srilathashettyspandhanagmail.com
ಎಂ.ಆರ್.ಅನಿಲ್ ಇ-ಮೇಲ್ krgb.anilgmail.com  ವಿಳಾಸ ಹೊಂದಿದ್ದಾರೆ. ಇನ್ನುಳಿದವರು ಅಂತರ್ಜಾಲದೊಂದಿಗೆ ಯಾವ ಸಂಪರ್ಕವನ್ನೂ ಹೊಂದಿಲ್ಲ.
ಅನುಭವದಲ್ಲಿ ಬಿ.ಎಸ್.ವೈ:  ನೇರ ಚುನಾವಣಾ ರಾಜಕೀಯದ ಅನುಭವದಲ್ಲಿ ಬಿಜೆಪಿಯ ಯಡಿಯೂರಪ್ಪರಿಗೆ ಮತ್ಯಾರೂ ಸಾಟಿ ಇಲ್ಲ. 1980ರಿಂದ ಇದೂವರೆಗೆ ಅವರು ಒಂದಲ್ಲಾ ಒಂದು ಚುನಾವಣೆಯ ಕಣದಲ್ಲಿದ್ದಾರೆ. ಇನ್ನು ಜೆಡಿಯು ಪಕ್ಷದ ಬಿ. ಧರ್ಮಪ್ಪ ಒಮ್ಮೆ ಸಾಗರ ಕ್ಷೇತ್ರದ ಶಾಸಕರಾಗಿದ್ದರು. ಪಕ್ಷೇತರ ಅಭ್ಯರ್ಥಿ ಎಂ.ಎಸ್. ಮೊಯಿನುದ್ದೀನ್ ಅವರಿಗೆ ಇದು 2ನೇ ಚುನಾವಣೆ. ಕರುನಾಡು ಪಕ್ಷದ ಶಶಿಕುಮಾರ್ ಅವರು ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಸಿದ್ದರು. ಉಳಿದವರಿಗೆಲ್ಲರೂ ನೇರ ಚುನಾವಣೆಯ ಕಣದಲ್ಲಿರುವುದು ಇದೇ ಮೊದಲು.
ಭಂಡಾರಿ ಓದು:  ಶೈಕ್ಷಣಿಕವಾಗಿ ಕಾಂಗ್ರೆಸ್ ಪಕ್ಷದ ಮಂಜುನಾಥ ಭಂಡಾರಿ ಎಲ್ಲರಿಗಿಂತ ಮೇಲುಗೈ ಹೊಂದಿದ್ದಾರೆ. ಎಂ.ಎ. (ಮೈಸೂರು ವಿಶ್ವವಿದ್ಯಾಲಯ), ಎಂ.ಫಿಲ್ (ಮದುರೈ ಕಾಮರಾಜ ವಿವಿ), ಪಿಎಚ್.ಡಿ. (ಮಧುರೈ ಕಾಮಗಾರ ವಿವಿ) ಇವರ ಮುಡಿಗೇರಿವೆ. ಯಡಿಯೂರಪ್ಪ ಅವರ ವಿದ್ಯಾರ್ಹತೆ ಪಿಯುಸಿ ಮಾತ್ರ. ಆದರೆ ಇವರಿಗೆ ಅಮೇರಿಕಾದ ವಿವಿಯೊಂದು ಗೌರವ ಡಾಕ್ಟರೇಟ್ ನೀಡಿದೆ.
ಗೀತಾ ಶಿವರಾಜಕುಮಾರ್ ಬಿಎ ಪದವೀಧರರು. ಅದೇ ರೀತಿ ಶ್ರೀಧರ ಕಲ್ಲಹಳ್ಳ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಬಿ. ಧರ್ಮಪ್ಪ ಬಿಎ, ಬಿಎಲ್ ಪದವೀಧರರು. ಕುಣಜೆ ಮಂಜುನಾಥ ಗೌಡ ಅವರಿಗೆ ಬಿಎ ಪದವಿ ಪೂರ್ಣಗೊಳಿಸಲು ಆಗಿಲ್ಲ. ಎಸ್. ಸತೀಶ್ ಸಾಲಿಯಾನ ದ್ವಿತೀಯ ಪಿಯುಸಿ ವರೆಗೆ ಹೋಗಿದ್ದಾರೆ. ಶ್ರೀಲತಾ ಶೆಟ್ಟಿ ಹಾಗೂ ಎಂ.ಎಸ್. ಮೊಯಿನುದ್ದೀನ್ ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ದಾರೆ. ಆದರೆ  ಬಿ.ಕೆ. ಶಶಿಕುಮಾರ್ ಎಸ್ಸೆಸ್ಸೆಲ್ಸಿ ಅನುತ್ತೀರ್ಣರಾಗಿದ್ದಾರೆ. ಎಂ.ಆರ್. ಅನಿಲ್ ಜೆಓಡಿಸಿ ಕೋರ್ಸ್ ಮುಗಿಸಿದ್ದಾರೆ. ಮಹಮದ್ ಫಯಾಜ್ ಅಹಮದ್ ಅವರು 8ನೇ ತರಗತಿ ಓದಿದ್ದು, ಜೆಓಡಿಸಿ ಪೂರ್ಣಗೊಳಿಸಿಲ್ಲ. ಎಚ್. ಸುರೇಶ್ ಪೂಜಾರಿ ಅವರ ಓದು 5ನೇ ತರಗತಿ ವರೆಗೆ ಮಾತ್ರ.



-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement