ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೋದಿ ಅಲೆ ಮಾಧ್ಯಮ ಸೃಷ್ಟಿ: ಭಂಡಾರಿ

Vishwanath S
Updated On : 2 Apr 2014, 11:37 am

ಹೊಸನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಅಲೆಯೂ ಇಲ್ಲ. ಮೋದಿ ಅಲೆ ಎಂಬುದು ಕೇವಲ ಮಾಧ್ಯಮ ಸೃಷ್ಟಿ ಎಂದು ಶಿವಮೊಗ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಹೇಳಿದ್ದಾರೆ.
 ತಾಲೂಕಿನ ಚಿಕಪೇಟೆ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಭಂಡಾರಿ, ದೇಶಕ್ಕಾಗಿ ಯಾವುದೇ ತ್ಯಾಗ ಮಾಡದ ಬಿಜೆಪಿ ಪ್ರತಿ ಚುನಾವಣೆಯಲ್ಲಿ ವಿವಿಧ ಅಲೆಯ ಗುಲ್ಲೆಬ್ಬಿಸುತ್ತಿದೆ. ಮೋದಿ ಪರವಾಗಲಿ, ಬಿಜೆಪಿ ಪರವಾಗಲಿ ಯಾವ ಅಲೆಯೂ ಕೆಲಸ ಮಾಡುವುದಿಲ್ಲ ಇದು ಕೇವಲ ಅವರ ಭ್ರಮೆ ಎಂದು ಆರೋಪಿಸಿದರು.
ಸೇರ್ಪಡೆ: ಹೊಸೂರು(ಸಂಪೇಕಟ್ಟೆ) ಗ್ರಾಪಂ ಮಾಜಿ ಉಪಾಧ್ಯಕ್ಷ ಕೃಷ್ಣ ದೇವಾಡಿಗ ಕಾಂಗ್ರೆಸ್‌ಗೆ ಈ ಸಂದರ್ಭದಲ್ಲಿ ಸೇರ್ಪಡೆಯಾದರು. ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್ ಅಧ್ಯಕ್ಷತೆ ವಹಿಸಿದ್ದರು. ಕಲಗೋಡು ರತ್ನಾಕರ್, ಪಟೇಲ್ ಗರುಡಪ್ಪಗೌಡ, ಬಗರಹುಕುಂ ಸಮಿತಿ ಅಧ್ಯಕ್ಷ ಏರಗಿ ಉಮೇಶ್,ನಗರ ಘಟಕದ ಅಧ್ಯಕ್ಷ ದೇವಗಂಗೆ ಚಂದ್ರಶೇಖರಶೆಟ್ಟಿ ಇತರರು ಉಪಸ್ಥಿತರಿದ್ದರು.
ಬಿಜೆಪಿಯವರೇನು ಹಾವೇ, ಗೆದ್ದರೇನು ಕಡಿಯುತ್ತಾರಾ?: ಅಬ್ದುಲ್ ವಾಜೀದ್
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.1
“¸e毾ÚßÈÚÁæÞ«Úß ಹಾವೇ... ಅವರು ಗೆದ್ದರೆ ನಮ್ಮನ್ನೇನು ಕಡಿಯುತ್ತಾರಾ...? ಕಾಂಗ್ರೆಸ್‌ನವರು ಈ ರೀತಿಯಾಗಿಯೇ ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಬಿತ್ತಿ ತಮ್ಮ ಪಕ್ಷಕ್ಕೆ ಮತ ಬೀಳುವಂತೆ ನೋಡಿಕೊಂಡರು. ಆದರೆ, ಈ ಬಾರಿ ಅಲ್ಪಸಂಖ್ಯಾತ ಸಮುದಾಯದವರು ಜೆಡಿಎಸ್‌ಗೆ ಬೆಂಬಲ ನೀಡುವ ನಿರ್ಧಾರ ÈÚáÛt¥Û§Áæ’
ಹೀಗೆಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ವಾಜೀದ್‌ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಅಲ್ಪಸಂಖ್ಯಾತ ಸಮಾಜದ ಶ್ರೇಯೋಭಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಪರಿಗಣಿಸಿ ಅಲ್ಪಸಂಖ್ಯಾತ ಸಮುದಾಯ ಈ ಬಾರಿ ಜೆಡಿಎಸ್‌ಗೆ ಬೆಂಬಲ ನೀಡುವ ನಿರ್ಧಾರ ಮಾಡಿದೆ. ನಾವು ಕೋಮುವಾದಿ ಬಿಜೆಪಿಯವರನ್ನು ಬೆಂಬಲಿಸಲ್ಲ ಎಂದರು.
ಪ್ರಚಾರಕ್ಕೆ ಜಮೀರ್:  ಜೆಡಿಎಸ್ ಮುಖಂಡ ಜಮೀರ್ ಅಹಮದ್ ಏ.4 ರಂದು ಜಿಲ್ಲೆಗೆ ಆಗಮಿಸಲಿದ್ದು, 3 ದಿನ ಪ್ರಚಾರ ನಡೆಸಲಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ನಾಯಕರಾಗಿರುವ ಜಮೀರ್ ಪ್ರಚಾರ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚಿನ ಶಕ್ತಿ ತುಂಬಲಿದೆ. ಹಾಗೆಯೇ ಎಸ್‌ಡಿಪಿಐ ಕೂಡ ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸಿರುವುದು ಅನುಕೂಲಕರವಾಗಿ ಪರಿಣಮಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಮುಖಂಡರಾದ ಹಮೀದ್, ಯೂಸುಫ್, ಮುನಾವರ್ ಪಾಷಾ ಮುಂತಾದವರಿದ್ದರು.
ಮತ ಹಾಕಿ ಅಭಿವೃದ್ಧಿಗೆ ಸಹಕರಿಸಿ
ಶಿಕಾರಿಪುರ: ಪ್ರಪಂಚದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದ್ದು, ಅಮೂಲ್ಯ ಮತದಾನದ ಹಕ್ಕು ಸದುಪಯೋಗಪಡಿಸಿಕೊಂಡು ಸೂಕ್ತ ವ್ಯಕ್ತಿಯ ಆಯ್ಕೆಯ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಲು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಸಹಾಯಕ ಚುನಾವಣಾಧಿಕಾರಿ ಗೋಪಾಲ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮಂಗಳವಾರ ನಡೆದ ಯುವ ಮತದಾರರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, 1952ರಲ್ಲಿ ಜಾರಿಯಾದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಇಂದು ಪ್ರಪಂಚದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹಿರಿಮೆಯನ್ನು ಭಾರತ ಹೊಂದಿದ್ದು, ಇಲ್ಲಿನ ಪ್ರಜಾಪ್ರಭುತ್ವದ ಮಾದರಿಯನ್ನು 25ಕ್ಕೂ ಅಧಿಕ ದೇಶಗಳು ಅನುಸರಿಸುತ್ತಿದೆ. ಬಡವ- ಶ್ರೀಮಂತ ಎಂಬ ಭೇದ- ಭಾವವಿಲ್ಲದೆ 18 ವರ್ಷ ಮೀರಿದ ಸರ್ವರಿಗೂ ಮತದಾನದ ಹಕ್ಕು ಕಲ್ಪಿಸಲಾಗಿದೆ ಎಂದರು.
ಟಿ.ಎನ್. ಶೇಷನ್ ಮುಖ್ಯ ಚುನಾವಣಾಧಿಕಾರಿಯಾದ ಸಂದರ್ಭದಲ್ಲಿ ಕೈಗೊಳ್ಳಲಾದ ಹಲವು ದಿಟ್ಟ ಕ್ರಮದಿಂದಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಗಮನಾರ್ಹ ಬದಲಾವಣೆಯಾಗಿವೆ. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಬಗ್ಗೆ ಮತದಾರರಿಗೆ ವಿಶ್ವಾಸವಿಲ್ಲದಿದ್ದಲ್ಲಿ ಅಭ್ಯರ್ಥಿಗಳಿಗೆ ಮತ ನೀಡದೆ ಪ್ರತ್ಯೇಕ ಗುಂಡಿ ಒತ್ತುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.
ಮತದಾನದಲ್ಲಿ ಪಾಲ್ಗೊಳ್ಳಿ: ಉಪನ್ಯಾಸಕ ಜಿ.ಆರ್. ಹೆಗಡೆ ಮಾತನಾಡಿ, ಪ್ರಜಾಪ್ರಭುತ್ವ ಯಶಸ್ವಿಯಾಗಲು ಮತದಾರರು ಸಂಪೂರ್ಣವಾಗಿ ಪಾಲ್ಗೊಳ್ಳಬೇಕಾಗಿದೆ. ದೇಶದ ಚುನಾವಣಾ ಕ್ರಮವನ್ನು ಪ್ರಪಂಚದ ಜನತೆ ಅತ್ಯಂತ ಸಮೀಪದಿಂದ ಗಮನಿಸುತ್ತಿದ್ದು, ಕಡ್ಡಾಯ ಮತದಾನದಲ್ಲಿ ಎಲ್ಲರೂ ಪಾಲ್ಗೊಂಡಲ್ಲಿ ಯೋಗ್ಯರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದರು.
ಕಾಲೇಜಿನ ಉಪ ಪ್ರಾಚಾರ್ಯ ಡಿ.ಕೆ. ಮಂಜಪ್ಪ, ಉಪನ್ಯಾಸಕ ಉಳ್ಳಿ ರಾಜಕುಮಾರ್, ನೇತ್ರಾವತಿ, ಸುಧೀರ್, ಸೋಮಶೇಖರ್, ಜಿ.ಆರ್. ಜೋಷಿ, ಚೈತ್ರ, ಅರ್ಪಿತ, ಕುಮಾರ್ ಉಪಸ್ಥಿತರಿದ್ದರು.
ಜಾತಿ ಆಧಾರದಲ್ಲಿ ಮತ ನೀಡಬೇಡಿ
ಹೊಸನಗರ: ಜಾತಿ ಆಧಾರದ ಮೇಲೆ ಮತ ಚಲಾವಣೆ ಮಾಡುವ ಕಾರ್ಯಕ್ಕೆ ಯಾರೂ ಮುಂದಾಗಬಾರದು ಎಂದು ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷ ನಾಯಕ ಕಲಗೋಡು ರತ್ನಾಕರ್ ವಿನಂತಿಸಿದ್ದಾರೆ.
ತಾಲೂಕಿನ ಪುರಪ್ಪೆಮನೆ, ಹರಿದ್ರಾವತಿ, ಹರತಾಳು, ಮಾರುತಿಪುರವೂ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರ ಮನೆ ಭೇಟಿ ನಡೆಸಿದ ಅವರು ಕಾಂಗ್ರೆಸ್ ಹಿಂದಿನಿಂದಲೂ ಜಾತ್ಯತೀತ ನಿಲುವಿಗೆ ಬದ್ಧವಾಗಿದೆ. ಇಲ್ಲಿ ಎಲ್ಲ ಜಾತಿ, ಜನಾಂಗದವರಿಗೂ ಮಾನ್ಯತೆ ನೀಡುತ್ತ ಬರಲಾಗಿದೆ. ಆದರೆ, ಕೆಲ ರಾಜಕೀಯ ಪಕ್ಷಗಳು ಏಕಾಎಕಿ ಚುನಾವಣೆಯಲ್ಲಿ ಜಾತಿ ಆಧರಿಸಿ ಮತಯಾಚನೆಗೆ ಮುಂದಾಗುವುದು ಖೇದದ ವಿಷಯ. ಇದಕ್ಕೆ ಮತದಾರರು ಮನಸ್ಸು ಮಾಡದೆ ತತ್ವ ಆಧರಿಸಿ ಮತ ನೀಡಬೇಕು ಎಂದರು.
ಮಂಜುನಾಥ ಭಂಡಾರಿ ಜಿಲ್ಲೆಯವರು. ಅವರಿಗೆ ಮತ ನೀಡುವುದರಿಂದ ಜಿಲ್ಲೆಯ ಅನೇಕ ನಿರೀಕ್ಷೆ ಈಡೇರಲಿದೆ ಎಂದರು. ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಪಟೇಲ್ ಗರುಡಪ್ಪಗೌಡ, ಜಿಲ್ಲಾ ಪಂಚಾಯತಿ ಸದಸ್ಯೆ ಜ್ಯೋತಿ, ಕುನ್ನೂರು ಮಂಜಪ್ಪ, ಮುಖಂಡರಾದ ಹುಣಸವಳ್ಳಿ ಚಂದ್ರಶೇಖರ್, ಕೋಡೂರು ಚಂದ್ರಮೌಳಿ, ರಾಜಪ್ಪ ಮತ್ತಿತರರು ಇದ್ದರು.
ಇಂದಿನಿಂದ ಸಿಲ್ಕ್ ಇಂಡಿಯಾ-2014 ಮೇಳ
 ಶಿವಮೊಗ್ಗ: ಮೈಸೂರಿನ ಹಸ್ತಶಿಲ್ಪಿ ಸಂಸ್ಥೆಯು ನಗರದ ರಾಯಲ್ ಆರ್ಕಿಡ್ ಹೊಟೇಲ್ ಸಭಾಂಗಣದಲ್ಲಿ ಏ.2 ರಿಂದ 5 ದಿನಗಳ ಕಾಲ ಸಿಲ್ಕ್ ಇಂಡಿಯಾ-2014 ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮೇಳದ ಕುರಿತು ಮಾಹಿತಿ ನೀಡಿದ ಹಸ್ತಶಿಲ್ಪಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಟಿ.ಅಭಿನಂದನ್, ಈ ಹಿಂದೆ ಶಿವಮೊಗ್ಗ ನಗರದಲ್ಲಿ 2 ಬಾರಿ ನಡೆಸಿದ ಮಾರಾಟ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮತ್ತೊಮ್ಮೆ ಮೇಳ ನಡೆಸುವಂತೆ ಗ್ರಾಹಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಏ.2 ರಿಂದ 6 ರವರೆಗೆ ಪ್ರದರ್ಶನ ಹಮ್ಮಿಕೊಂಡಿರುವುದಾಗಿ ವಿವರಿಸಿದರು.
ಪ್ರದರ್ಶನ -ಮಾರಾಟ:  ದೇಶದ ವಿವಿಧೆಡೆಯಿಂದ ಸುಮಾರು 40ಕ್ಕೂ ಹೆಚ್ಚು ಮಾರಾಟಗಾರರು ಮೇಳದಲ್ಲಿ ಭಾಗವಹಿಸಲಿದ್ದಾರೆ. ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್, ಢಾಕಾ ಮತ್ತು ಲಡಾಕ್ ಸೀರೆಗಳು, ಡಿಸೈನರ್ ಎಂಬ್ರಾಯ್ಡರಿ ಸೀರೆ ಮತ್ತು ಡ್ರೆಸ್ ಬಲ್ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರಿಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡರ್‌ಗಳುಳ್ಳ ಮಲ್ಬಾರಿ ಸಿಲ್ಕ್, ಮೈಸೂರು ರೇಷ್ಮೆ, ಕೋಲ್ಕತ್ತಾ ರೇಷ್ಮೆ, ಬನಾರಸ್ ಮತ್ತು ಜಮ್ದಾನಿ ರೇಷ್ಮೆ, ಶಿಫಾಸ್ ಸೀರೆಗಳು, ಬುಟ್ಟಿ ಸೀರೆಗಳು, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿದೆ.   ಏ.2ರ ಸಂಜೆ 4 ಗಂಟೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್ ಸೀರೆಗಳ ಮಾರಾಟ ಹಾಗೂ ಪ್ರದರ್ಶನ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
  ಹಸ್ತಶಿಲ್ಪಿ ಸಂಸ್ಥೆ ಸಂಯೋಜಕ ಶಿವಶಂಕರ್ ಉಪಸ್ಥಿತರಿದ್ದರು.
ವಿದ್ಯುತ್ ಸಂಪರ್ಕಕ್ಕೆ ಆಗ್ರಹಿಸಿ ರಸ್ತೆ ತಡೆ
ಸೊರಬ: ತಾಲೂಕು ಚಿಟ್ಟೂರು, ಕಾರೆಕೊಪ್ಪ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಒಂದು ವಾರದಿಂದ ವಿದ್ಯುತ್ ಸಂಪರ್ಕವಿಲ್ಲ ಎಂದು ರೊಚ್ಚಿಗೆದ್ದು, ಸೋಮವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ, ಅಧಿಕಾರಿ, ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗಿದರು.
ಈ ಹಿಂದೆ ಅಸಮರ್ಪಕ ವಿದ್ಯುತ್ ವಿತರಣೆ ಕುರಿತಂತೆ ಮೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿ, ಸರಿಪಡಿಸುವಂತೆ ಆಗ್ರಹಿಸಿ, ಮನವಿ ಸಲ್ಲಿಸಿದ್ದರೂ, ಸಹಾ ಇಲಾಖೆ ಕಿವಿಗೆ ಹಾಕಿಕೊಳ್ಳದೇ ಉದಾಸೀನ ಮಾಡಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು, ಭಾನುವಾರ ಸರಿರಾತ್ರಿ ವೇಳೆಗೆ ಗ್ರಾಮದಿಂದ ಪಟ್ಟಣಕ್ಕೆ ದೌಡಾಯಿಸಿ ಸೋಮವಾರ ಮಧ್ಯಾಹ್ನದ ತನಕ ರಸ್ತೆತಡೆ ನಡೆಸಿದರು.
ಜಾಗ ಬಿಟ್ಟು ಕದಲೆವು: ಮೆಸ್ಕಾಂ ವಿರುದ್ಧ ಹರಿಹಾಯ್ದ ಅವರು, ಗ್ರಾಮಕ್ಕೆ ಸರಿಯಾಗಿ ವಿದ್ಯುತ್ ನೀಡುವ ತನಕವೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದರು. ಈ ಸಮಯದಲ್ಲಿ ಆಗಮಿಸಿದ ಎಂಎಲ್‌ಸಿ ಭಾರತಿಶೆಟ್ಟಿ ಅಧಿಕಾರಿಗಳೊಂದಿಗೆ ಮಾತನಾಡಿ, ಕೂಡಲೆ ವಿದ್ಯುತ್ ವಿತರಣೆಯ ಸಮರ್ಪಕ ನಿರ್ವಹಣೆ ಆಗಬೇಕು ಎಂದು ಸೂಚಿಸಿ, ಉದ್ರಿಕ್ತ ವಾತಾವರಣವನ್ನು ತಿಳಿಗೊಳಿಸಿದರು. ರಸ್ತೆ ತಡೆಯಲ್ಲಿ ಗ್ರಾಮದ ನೂರಾರು ಜನತೆ ಹಾಜರಿದ್ದರು.
  ತಹಸೀಲ್ದಾರ್ ತಿಪ್ಪುರಾಯ್, ಶಿಕಾರಿಪುರದ ಡಿವೈಎಸ್ಪಿ, ಸಿಪಿಐ, ಸೊರಬ ಸಿಪಿಐ ನಾಗರಾಜು, ಸಾಗರ ಮೆಸ್ಕಾಂ ಇಇ, ಇಲ್ಲಿನ ಮೆಸ್ಕಾಂ ಎಇಇ ವೆಂಕಟೇಶ್, ಬಿಜೆಪಿ ಮುಖಂಡ ಗಜಾನನರಾವ್ ಇದ್ದರು.
ಬಸವನಹೊಳೆ ಡ್ಯಾಂ ಪ್ರದೇಶಕ್ಕೆ ಕಾಗೋಡು ಭೇಟಿ
ಸಾಗರ: ವಿಪರೀತ ಬಿಸಿಲಿನಿಂದಾಗಿ ಬಸವನಹೊಳೆಯಲ್ಲಿ ನೀರು ಸಂಗ್ರಹದ ಮಟ್ಟ ಕುಸಿಯುತ್ತಿದ್ದು, ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡುವ ದೃಷ್ಟಿಯಿಂದ ಪರ್ಯಾಯ ಮಾರ್ಗದ ಚಿಂತನೆ ನಡೆಸಲಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಬಸವನಹೊಳೆ ಡ್ಯಾಂ ಪ್ರದೇಶಕ್ಕೆ ಭೇಟಿ ನೀಡಿ ನೀರು ಸಂಗ್ರಹ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಪಟ್ಟಣಕ್ಕೆ ನೀರು ಪೂರೈಕೆ ಮಾಡಲು ಬಹು ಉದ್ದೇಶಿತ ಶರಾವತಿ ಹಿನ್ನೀರಿನಿಂದ ನೀರು ತರುವ ಯೋಜನೆ ಜುಲೈ ಅಂತ್ಯಕ್ಕೆ ಮುಗಿಯುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ಬೇಸಿಗೆಯಲ್ಲಿ ಕುಡಿಯವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ವಿವಿಧ ಭಾಗಗಳಲ್ಲಿ 18 ಕೊಳವೆ ಬಾವಿ ಕೊರೆಸಲು ತಿಳಿಸಲಾಗಿದೆ. ಇದರ ಜತೆಗೆ ಪಟ್ಟಣವ್ಯಾಪ್ತಿಯಲ್ಲಿರುವ 100ಕ್ಕೂ ಹೆಚ್ಚು ಬಾವಿಗಳನ್ನು ಸ್ವಚ್ಛಗೊಳಿಸಲು ಆದೇಶ ನೀಡಲಾಗಿದೆ. ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ 50 ಲಕ್ಷ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ ಎನ್. ಲಲಿತಮ್ಮ, ಸದಸ್ಯರಾದ ಶ್ರೀನಾಥ್, ಗಣಾಧೀಶ್, ಜಿ.ಕೆ. ಭೈರಪ್ಪ, ಪ್ರಮುಖರಾದ ಕರುಣಾಕರ, ಡಿ.ದಿನೇಶ್, ಪೌರಾಯುಕ್ತ ಚಂದ್ರಶೇಖರ್, ವಿಠ್ಠಲ್ ಹೆಗಡೆ, ಪೂವಯ್ಯ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement