'ಕೇಜ್ರಿ ಮಾದರಿ ವ್ಯಕ್ತಿ'
ಸೊರಬ: ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ, 28 ಸ್ಥಾನಗಳನ್ನು ಪಡೆದು ದೆಹಲಿ ಅಧಿಕಾರದ ಗದ್ದುಗೆಗೇರಿ ಸ್ವಚ್ಛ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಅರವಿಂದ ಕೇಜ್ರಿವಾಲ್ ಇಡೀ ದೇಶಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಕೆ.ಜಿ. ಶ್ರೀಧರ ತಿಳಿಸಿದರು. ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆಮ್ ಆದ್ಮಿ ಪಕ್ಷದ ಪರವಾಗಿ ಮತಯಾಚನೆ ಮಾಡಿದ ನಂತರ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಅವರ ಸರಳ ವ್ಯಕ್ತಿತ್ವದ ಪ್ರಭಾವ ಎಲ್ಲಾ ರಾಜಕಾರಣಿಗಳ ಮೇಲೆ ಬೀರಿದೆ. ಇಡೀ ದೇಶದಲ್ಲಿ ಆಮ್ ಆದ್ಮಿ ಪಾರ್ಟಿಯ ಅಭಿಯಾನ ಪ್ರಾರಂಭಗೊಂಡಿದ್ದು, ಅವರ ಜನಪ್ರಿಯತೆಯನ್ನು ಸಹಿಸದ ವಿಪಕ್ಷಗಳು ಎಎಪಿ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರದಿಂದ ಕೆಳಗಿಳಿಯುವಂತೆ ನೋಡಿಕೊಳ್ಳುವ ಮೂಲಕ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗಿದೆ ಎಂದರು. ಸಾಗರ ತಾಲೂಕು ಸಂಚಾಲಕ ಕಬಸೆ ಅಶೋಕ್‌ಮೂರ್ತಿ ಪಕ್ಷದ ತಾಲೂಕು ಸಂಚಾಲಕ ವಾಮದೇವಗೌಡ ಹಾಲಘಟ್ಟ, ಮುಖಂಡರಾದ ಜಿ. ಬಂಗಾರಪ್ಪ, ಲೋಕಪ್ಪ, ಡಾ.ವಿರೂಪಾಕ್ಷಪ್ಪ, ದೂಗೂರು ಪರಮೇಶ್ವರ, ಎಂ.ಡಿ. ತನ್ವೀರ್ ಲಕ್ನೋ ಮೊದಲಾದವರು ಇದ್ದರು.