ಗಿಮಿಕ್ಗೆ ಒಳಗಾಗದೇ ಮತ ಚಲಾಯಿಸಿ: ಭಂಡಾರಿ
ಸಾಗರ: ದೇಶದಲ್ಲಿ ಕಾಂಗ್ರೆಸ್ನಿಂದ ಮಾತ್ರ ಸಮಾನ ಸಮಾಜ ನಿರ್ಮಾಣ ಸಾಧ್ಯ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಹೇಳಿದರು.
ಇಲ್ಲಿನ ಗಾಂಧಿಮಂದಿರದಲ್ಲಿ ನಡೆದ ಕಾಂಗ್ರೆಸ್ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನನಗೆ ಜಾತಿ ಬಗ್ಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಪಕ್ಷವೇ ನನ್ನ ಜಾತಿಯಾಗಿದ್ದು, ಮತದಾರರು ಜಾತ್ಯಾತೀತ ಮನೋಭಾವ ಹೊಂದಿರುವ ಹಸ್ತದ ಗುರುತಿಗೆ ಮತ ನೀಡುವ ಮೂಲಕ ನನ್ನ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಚುನಾವಣೆ ವೇಳೆ ಗಿಮಿಕ್ಗಾಗಿ ಸಿನಿಮಾ ನಟರು ಬರುತ್ತಾರೆ. ಅಂತಹ ಗಿಮಿಕ್ಗೆ ಒಳಗಾಗದೆ ನಿಮ್ಮ ಸಮಸ್ಯೆಗೆ ಸ್ಪಂದಿಸುವ ನನಗೆ ಮತ ನೀಡಿ. ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ನನಗೆ ಶ್ರೀರಕ್ಷೆಯಾಗಿದ್ದು, ಮತದಾರರು ಸಹ ಹೋದ ಕಡೆಗಳಲ್ಲಿ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಮತಗಳು ಸಿಗಲಿದೆ ಎಂದರು.
ಕೆಪಿಸಿಸಿ ವಕ್ತಾರ ಕೆ. ದಿವಾಕರ್ ಮಾತನಾಡಿದರು. ಪ್ರಫುಲ್ಲಾ ಮಧುಕರ್, ತೀ.ನ. ಶ್ರೀನಿವಾಸ್, ಕೆ. ಹೊಳೆಯಪ್ಪ, ಮಕ್ಬೂಲ್ ಅಹ್ಮದ್, ಐ.ಎನ್. ಸುರೇಶಬಾಬು, ಖಂಡಿಕಾ ಪ್ರಭಾಕರ್, ಮಹಾಬಲ ಕೌತಿ, ಎನ್. ಲಲಿತಮ್ಮ, ಮಲ್ಲಿಕಾರ್ಜುನ ಹಕ್ರೆ, ಅನ್ವರ್, ಕಲಗೋಡು ರತ್ನಾಕರ್, ಭೀಮನೇರಿ ಆನಂದ್ ಹಾಜರಿದ್ದರು.