ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರ

Mainashree
Updated On : 4 Apr 2014, 11:05 am

ಭದ್ರಾವತಿ:  ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ಪರ ಇರುವ ಸರ್ಕಾರ, ರೈತರ ಹಾಗೂ ಮಹಿಳೆಯರ ರಕ್ಷಣೆಗೋಸ್ಕರ ಇರುವ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
 ಅವರು ಪಟ್ಟಣದ ಕನಕ ಮಂಟಪ ಮೈದಾನದಲ್ಲಿ ಗುರುವಾರ ಮಧ್ಯಾಹ್ನ ಕಾಂಗ್ರೆಸ್  ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಮಂಜುನಾಥ ಭಂಡಾರಿ ಪರ ಪ್ರಚಾರ ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡಿ, ಭದ್ರಾವತಿ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಬ್ರಾಹಿಂ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡದೆ ತಪ್ಪು ಮಾಡಿದ್ದಾರೆ. ಇಲ್ಲಿನ ಎರಡು ಕೈಗಾರಿಕೆಗಳು ಅಭಿವೃದ್ಧಿಯಾಗಬೇಕಾಗಿದೆ. ರಸ್ತೆಗಳು ಅಭಿವೃದ್ಧಿಯಾಗಬೇಕಾಗಿದೆ. ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳು ಪೂರ್ಣವಾಗಬೇಕಾಗಿದೆ. ಇವೆಲ್ಲಾ ಕೆಲಸಗಳು ಪೂರ್ಣವಾಗಬೇಕಾದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರಿಗೆ ನಿಮ್ಮ ಮತಗಳನ್ನು ನೀಡಿ ಎಂದರು.
 ಬಿಜೆಪಿ ಪಕ್ಷದವರು ಧಾರ್ಮಿಕ ಅಲ್ಪಸಂಖ್ಯಾತರ ವಿರೋಧ ಕಟ್ಟಿಕೊಳ್ಳುವ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದರಿಂದ ಕೋಮುಸೌಹಾರ್ದತೆಗೆ ಧಕ್ಕೆ ಬಢಿರುತ್ತದೆ. ವಿನಾಕಾರಣ ಬಾಬ್ರಿ ಮಸೀದಿ ದ್ವಂಸ ಮಾಡಿ ದೇಶದಲ್ಲಿ ಅಶಾಂತಿಯನ್ನು ಹರಡಿದ್ದಾರೆ. ಮಹಾತ್ಮ ಗಾಂಧಿಯನ್ನು ಕೊಂದ ನಾತೂರಾಂ ಗೋಡ್ಸೆ ಚಿತ್ರವನ್ನು ಪೂಜಿಸುವ ಆರ್.ಎಸ್.ಎಸ್ ಸಂಘಟಕರು ಗಾಂಧಿ ಹತ್ಯೆಗೆ ನಾವು ಕಾರಣರಲ್ಲ ಎನ್ನುತ್ತಾರೆ. ಮೋದಿಯೂ ಸಹ ಓರ್ವ ಹಾರ್ಡ್‌ಕೋರ್ ಆರ್.ಎಸ್.ಎಸ್ ಕಾರ್ಯಕರ್ತ ಎಂದರು.
 ಕರ್ನಾಟಕದಲ್ಲಿ ಮೋದಿ ಅಲೆಯನ್ನು ಮಾಧ್ಯಮಗಳ ಮೂಲಕ ಬಿಜೆಪಿ ಸೃಷ್ಟಿಸಿದೆಯೇ ಹೊರತು ಆ ರೀತಿ ಯಾವುದೇ ಅಲೆ ವಾಸ್ತವವಾಗಿ ಕಂಡುಬಂದಿಲ್ಲ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement