ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ರೋಡ್ ಶೋ: ಮತಯಾಚನೆ

Vishwanath S
Updated On : 5 Apr 2014, 11:23 am

ಶಿವಮೊಗ್ಗ: ನಗರದಲ್ಲಿ ಶುಕ್ರವಾರ ಸಂಜೆ ಕೆ.ಎಸ್.ಈಶ್ವರಪ್ಪ ಹಾಗೂ ಪಕ್ಷದ ಪ್ರಮುಖ ನಾಯಕರು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಸಂಜೆ 4.30 ರಿಂದ ಆರಂಭವಾದ ರ್ಯಾಲಿ ಅಂಬೇಡ್ಕರ್ ಶಕ್ತಿ ಕೇಂದ್ರ ವ್ಯಾಪ್ತಿಯ ವಾರ್ಡ್ ನಂ.2, 3, 8, 9, 10, 11ರ ಪ್ರದೇಶವಾದ ಉಷಾ ನರ್ಸಿಂಗ್ ಹೋಂನಿಂದ ಪ್ರಾರಂಭವಾಗಿ ರವೀಂದ್ರ ನಗರ ಮುಖ್ಯರಸ್ತೆ, ಗಾಂಧಿನಗರ ಮುಖ್ಯರಸ್ತೆ, ಸವಳಂಗ ರಸ್ತೆ, ಶಿವಮೂರ್ತಿ ಸರ್ಕಲ್, ಜಯನಗರ, ಬಸವನಗುಡಿ, ಟ್ಯಾಂಕ್ ಮೊಹಲ್ಲಾ, ಬಾಪೂಜಿ ನಗರ, ಸಂಗೊಳ್ಳಿ ರಾಯಣ್ಣ ಸರ್ಕಲ್, ಶಾಂತಿನಗರ, ತ್ರಿಮೂರ್ತಿ ನಗರ, ಕೃಷಿ ನಗರ, ಬಸವೇಶ್ವರ ನಗರ ಮೂಲಕ ಉಷಾ ನರ್ಸಿಂಗ್ ಹೋಂ ಹತ್ತಿರ ಮುಕ್ತಾಯಗೊಂಡಿತು.
ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಜಿಲ್ಲಾ ವಕ್ತಾರ ಎಂ.ಶಂಕರ್, ನಗರ ಬಿಜೆಪಿ ಅಧ್ಯಕ್ಷ ಎಸ್.ಜ್ಞಾನೇಶ್ವರ್, ನಗರ ಪಾಲಿಕೆ ಸದಸ್ಯ ಎನ್.ಜೆ.ರಾಜಶೇಖರ್, ಸತೀಶ್, ಜಿಲ್ಲಾ ಕಾರ್ಯದರ್ಶಿ ಅರುಣ್, ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ್ ಹಾಗೂ
ಪ್ರಮುಖರಾದ ಬೆಳ್ಳಕೆರೆ ಸಂತೋಷ್, ಆ.ಮ. ಪ್ರಕಾಶ್, ಚಂದ್ರಶೇಖರ್ ಹಾಗೂ ಇನ್ನಿತರರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಧ್ಯಮ ಪ್ರಮುಖ ಬಿ.ಆರ್.ಮಧುಸೂಧನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement