100 ಊರುಗಳಲ್ಲಿ ಮೋದಿ ಭಾಷಣ ಏಕಕಾಲದಲ್ಲಿ
ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೇರಲು ಬಗೆಬಗೆಯ ಪ್ರಚಾರ ಮಾಡುತ್ತಿರುವ ಬಿಜೆಪಿ ಇದೀಗ 3ಡಿ ತಂತ್ರಜ್ಞಾನದ ಪ್ರಯೋಗಕ್ಕೆ ಕೈ ಹಾಕಿದೆ.
ತ್ರಿಡಿ ತಂತ್ರಜ್ಞಾನ ಬಳಸಿ ದೇಶದ 100 ಊರುಗಳಲ್ಲಿ ಏಕಕಾಲದಲ್ಲಿ ನರೇಂದ್ರ ಮೋದಿಯವರು ಪ್ರಚಾರ ಭಾಷಣ ಮಾಡಲಿದ್ದಾರೆ. ಈ ಮೂಲಕ ನರೇಂದ್ರ ಮೋದಿಯವರು ಶಿವಮೊಗ್ಗವನ್ನು ಪ್ರವೇಶಿಸಲಿದ್ದಾರೆ ಎಂಬುದು ಬಿಜೆಪಿಯ ಮಾತು.
ಈ ವಿಶೇಷ ಪ್ರಚಾರವನ್ನು ನರೇಂದ್ರ ಮೋದಿಯವರೇ ಆವಿಷ್ಕಾರಗೊಳಿಸಿದ್ದು, ಇದನ್ನು ದೇಶದಲ್ಲಿ ಬಳಸಿದ ಏಕಮಾತ್ರ ನಾಯಕರಾಗಲಿದ್ದಾರೆ. ಈ ನೇರ ಪ್ರಸಾರವು ಕರ್ನಾಟಕದ ಐದು ಜಾಗಗಳಲ್ಲಿ ಆಗಲಿದ್ದು, ಸಾಗರದಲ್ಲಿ ನಡೆಯಲಿದೆ.
ಸೋಮವಾರ 7 ಗಂಟೆಗೆ ಸಾಗರದ ನೆಹರೂ ಮೈದಾನದಲ್ಲಿ ನರೇಂದ್ರಮೋದಿಯವರ ಪ್ರಚಾರ ಸಭೆ 3ಡಿ ತಂತ್ರಜ್ಞಾನದ ಮೂಲಕ ನಡೆಯಲಿದೆ.