ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದಿನಿಂದ ಉದ್ಧಾಂಜನೇಯ ಜಾತ್ರೆ

Rashmi Kasaragodu
Updated On : 7 Apr 2014, 10:53 am

ಶಿವಮೊಗ್ಗ: ಭದ್ರಾವತಿ ಸಮೀಪ ಗಂಗೂರಿನ ಬಳಿ ದಟ್ಟ ಕಾನನದ ನಡುವೆ ಇರುವ ಉದ್ಧಾಂಜನೇಯ ದೇವಸ್ಥಾನದಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.
ಐತಿಹ್ಯ: ಭದ್ರಾವತಿಯಿಂದ ಶಿವನಿ ರಸ್ತೆಯಲ್ಲಿ ಸಾಗುವಾಗ ಸಿಗುವ ಗಂಗೂರು ಬಳಿ ಕಾಡಿನ ಮಧ್ಯೆ ಇರುವ ಉದ್ಧಾಮಾಂಜನೇಯ ಹಳ್ಳಿಗರ ಪಾಲಿಗೆ ಉದ್ಧಾಂಜನೇಯ. ಇಲ್ಲಿರುವ ಬೃಹದಾಕಾರದ ಕಲ್ಲಿನ ಮೇಲೆ ಕೆತ್ತಲಾದ ಆಂಜನೇಯ ಮೂರ್ತಿಗೆ ಸುಮಾರು 800 ವರ್ಷಗಳ ಇತಿಹಾಸ ಇರಬಹುದು ಎಂಬ ಅಂದಾಜಿದೆ ದೇವಸ್ಥಾನ ಟ್ರಸ್ಟ್‌ನವರು ವಿವರಿಸುತ್ತಾರೆ.
ಭಕ್ತರ ಹೆಚ್ಚಳದಿಂದಾಗಿ ದಿನ ದಿನಕ್ಕೆ ಪ್ರವರ್ಧಮಾನಕ್ಕೆ ಬಂದ ಈ ಉದ್ಧಾಮಾಂಜನೇಯನ ಸನ್ನಿಧಾನದಲ್ಲಿ ಪ್ರತಿ ಹುಣ್ಣಿಯಂದು ಸಾವಿರಾರು ಜನಸೇರುತ್ತಾರೆ, ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಜಾತ್ರಾ ವಿಶೇಷ:
ಬೆಳಿಗ್ಗೆ ಕೂಡಿಪೂಜೆ, ಧ್ವಜಾರೋಹಣ, ಸ್ವಾಮಿಗೆ ಪಂಚಾಮೃತ ಮತ್ತು ರುದ್ರಾಭಿಷೇಕ, ಗಣಪತಿ ಪುಣ್ಯಾಹ, ನಾಂದಿ, ಮಹಾಸಂಕಲ್ಪ, ಮಹಾಗಣಪತಿ ಹೋಮ, 108 ದಂಪತಿಗಳಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ನವಗ್ರಹ ಹೋಮ, ದುರ್ಗಾ ಹೋಮ ನಡೆಯಲಿದೆ.
ಏ. 8ರಂದು 1008 ಕಳಶಗಳ ಗಂಗಾಪೂಜೆ, ಗಂಗಾ ಕಳಶಗಳ ಮೆರವಣಿಗೆ, ಕುಂಭಾಭಿಷೇಕ, ರಾಮತಾರಕ ಹೋಮ, ಗಣಹೋಮ ನೆರವೇರುವುದು. ಸ್ವಾಮಿಗೆ ವಿವಿಧ ತರಕಾರಿಗಳಿಂದ ಅಲಂಕಾರವಿರುತ್ತದೆ. ಸಂಜೆ ಮಹಾ ಸುದರ್ಶನ ಹೋಮ, ಅಷ್ಟಾವಧಾನ ಸೇವೆ ನಡೆಯಲಿದೆ.
ಏ. 9ರಂದು ಬೆಳಿಗ್ಗೆ ಗಣಹೋಮ, ಸ್ವಾಮಿಗೆ ಅಭಿಷೇಕ ಮತ್ತು ರುದ್ರಾಭಿಷೇಕ, ಸ್ವಾಮಿಗೆ ಹೂವಿನ ವಿಶೇಷ ಅಲಂಕಾರ ಸೇವೆ ಇರುತ್ತದೆ. ಏ.7ರಂದು ಬೆಳಿಗ್ಗೆ ಸುಮತ್ತಮುತ್ತಲ ಹಳ್ಳಿಗಳ ಗ್ರಾಮ ದೇವತೆಗಳು ಶ್ರೀಕ್ಷೇತ್ರಕ್ಕೆ ಆಗಮಿಸಲಿವೆ.
ಮೂರು ದಿನಗಳ ಪೂಜೆಯ ನೇತೃತ್ವವನ್ನು ವೇ.ಬ್ರ.ಅಶೋಕ ಗಣಪತಿ ಶರ್ಮ ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement