ಗೀತಾ ಪರ ಪ್ರಚಾರ
ಸೊರಬ: ತಾವು ಯಾವುದೇ ಪಕ್ಷದ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿಲ್ಲ. ಶಿವಣ್ಣ ಮತ್ತು ನನ್ನ ನಡುವಿನ ಆತ್ಮೀಯತೆ ಮತ್ತು ಸ್ನೇಹ ಸಂಬಂಧದ ಸಲುವಾಗಿ ಗೀತಾ ಶಿವರಾಜ್ಕುಮಾರ್ ಪರವಾಗಿ ಮತಯಾಚಿಸಲು ಬಂದಿದ್ದೇನೆ ಎಂದು ಚಿತ್ರ ನಟ ಉಪೇಂದ್ರ ಹೇಳಿದರು.
ಪಟ್ಟಣದ ಮುಖ್ಯ ಬೀದಿಯಲ್ಲಿ ಜೆಡಿಎಸ್ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಪರವಾಗಿ ರೋಡ್ ಶೋ ನಡೆಸಿ ಮತಯಾಚಿಸಿದ ನಂತರ ಪಟ್ಟಣದ ಬಸ್ಸು ನಿಲ್ದಾಣ ಆವರಣದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.