ಮೋದಿ ಹವಾ ಮತವಾಗಿ ಪರಿವರ್ತನೆಯಾಗಲಿ
ಶಿವಮೊಗ್ಗ: ನರೇಂದ್ರ ಮೋದಿ ಹವಾ ಇದ್ದರೆ ಸಾಲದು, ಅದು ಮತವಾಗಿ ಪರಿವರ್ತಿಸುವ ಕಾರ್ಯವಾಗಬೇಕು ಎಂದು ಬಿಜೆಪಿ ಹಿರಿಯ ಕಾರ್ಯಕರ್ತ ಡಿ.ಎಂ.ರಂಗನಾಥ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಸಂಸ್ಥಾಪನಾ ದಿನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ಸೈಕಲ್ ಮುಂದೆ ಹೋಗಬೇಕೆಂದರೆ ಟ್ಯೂಬ್ನಲ್ಲಿ ಗಾಳಿ ಇರಬೇಕು. ಅದೇ ರೀತಿ ಮೋದಿ ಹವಾ ನಮ್ಮ ಮಧ್ಯೆ ಇದ್ದರೆ ಸಾಲದು, ಅದು ಸದ್ಭಳಕೆಯಾಗಬೇಕು. ಮೋದಿ ಹವಾ ಇರುವುದನ್ನು ಇಡೀ ದೇಶದಲ್ಲಿ ಒಪ್ಪುವ ವಿಷಯ ಎಂದು ಹೇಳಿದರು.
ಎನ್ಡಿಎ ಖಚಿತ: ಈ ಬಾರಿ ಐತಿಹಾಸಿಕ ಚುನಾವಣೆ ಎಂದು ರಾಷ್ಟ್ರದೆಲ್ಲೆಡೆ ಚರ್ಚಿತಾವಾಗುತ್ತಿದೆ. ಚುನಾವಣೆ ಭಾರತದ ದಿಕ್ಕು ಬದಲಾಯಿಸುವ ಚುನಾವಣೆ ಎಂದ ಅವರು, ಎನ್ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ, ಯಾವುದೇ ಅನುಮಾನವಿಲ್ಲ ಎಂದು ಪ್ರತಿಪಾದಿಸಿದರು.