ವಿದ್ಯುತ್ ದೀಪ ಅಳವಡಿಕೆ
ಜೋಗ್ ಫಾಲ್ಸ್: ಸಂಪರ್ಕ ಕಲ್ಪಿಸುವ ಉತ್ತಮ ರಸ್ತೆ, ಬೀದಿ ದೀಪಗಳಿಂದ ಊರಿನ ಅಭಿವೃದ್ಧಿಯೊಂದಿಗೆ ಎಲ್ಲವನ್ನು ಆಕರ್ಷಿಸಲು ಸಾಧ್ಯ ಎಂದು ನಿಗಮದ ಮುಖ್ಯ ಅಭಿಯಂತರ ಜಿ. ಹನುಮಂತಪ್ಪ ತಿಳಿಸಿದರು.
ಅವರು ಕಾಲೋನಿಯಲ್ಲಿ ನಿಗಮದ ವತಿಯಿಂದ ಅಳವಡಿಸಲಾದ ವಿದ್ಯುತ್ ದೀಪದ ಉದ್ಘಾಟನೆ ನೆರವೇರಿಸಿ, 30 ಎಲ್ಇಡಿ ಹಾಗೂ 25 ಡೆಕೋರೆಟಿವ್ ದೀಪಗಳನ್ನು ಮುಖ್ಯ ಬಸ್ಸು ನಿಲ್ದಾಣದಿಂದ ನಿಗಮದ ಕಚೇರಿ ಸಂಕೀರ್ಣದವರೆಗೆ ಅಳವಡಿಸಲಾಗಿದೆ. ಎಂದರು.
ಸಿವಿಲ್ ವಿಭಾಗದ ಮುಖ್ಯ ಅಭಿಯಂತರ ರಾಜಮುಡಿ, ಲೆಕ್ಕಪತ್ರ ವಿಭಾಗದ ಪ್ರಧಾನ ಪ್ರಬಂಧಕ ಬಿ. ನಿಜೇಂದ್ರ, ಕಾರ್ಯನಿರ್ವಾಹಕ ಅಭಿಯಂತರ ಸಿ. ಶಿವಶಂಕರ್, ಪಿ.ಡಿ. ಭಟ್, ಸಿ. ಗಿರೀಶ್ ಹಾಜರಿದ್ದರು.