ಗೆಲವಿಗೆ ಶ್ರಮಿಸಿ; ರಮೇಶ್
ಭದ್ರಾವತಿ: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಕಾರ್ಯಕರ್ತರು ಅವೆಲ್ಲವನ್ನೂ ಬದಿಗೊತ್ತಿ ಪಕ್ಷದ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರನ್ನು ಅತಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಲು ಪ್ರಯತ್ನಿಸಬೇಕೆಂದು ಭದ್ರಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ರಮೇಶ್ ಕರೆ ನೀಡಿದರು.
ಪಟ್ಟಣದ ಚನ್ನಗಿರಿ ರಸ್ತೆಯಲ್ಲಿ ಉದ್ಘಾಟನೆಗೊಂಡ ಪಕ್ಷದ ಚುನಾವಣಾ ಪ್ರಚಾರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಪಕ್ಷದ ಮುಖಂಡ ಎನ್. ಕೃಷ್ಣಮೂರ್ತಿ, ಭದ್ರಾವತಿ ನಗರ ಬ್ಲಾಕ್ ಸಮಿತಿ ಅಧ್ಯಕ್ಷ ಕೆ.ಟಿ. ಗಿರಿಯಪ್ಪ, ಮಂಜಪ್ಪಗೌಡ, ಬಲ್ಕಿಶ್ಬಾನು ಇತರರಿದ್ದರು.