ಜೆಡಿಎಸ್ ಅಭ್ಯರ್ಥಿ ಗೀತಾ ಬೆಂಬಲಿಸಿ: ಶಾಸಕ ಅಪ್ಪಾಜಿ
ಭದ್ರಾವತಿ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತದಾರರು ಮತಗಳನ್ನು ನೀಡುವಂತೆ ಶಾಸಕ ಎಂ.ಜೆ.ಅಪ್ಪಾಜಿ ಹೇಳಿದರು.
ಪಟ್ಟಣದ ವಿಐಎಸ್‌ಎಲ್ ಮುಖ್ಯದ್ವಾರದ ಎದುರು ಸೋಮವಾರ ನಡೆದ ಜೆಡಿಎಸ್ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಮತ್ತು ಅಧಿಕಾರ ಸ್ವಹಿತಾಸಕ್ತಿಗೆ ದುರ್ಬಳಕೆ ಮಾಡಿಕೊಂಡ ಬಿಜೆಪಿ ಹಾಗೂ ಅಧಿಕಾರವಿದ್ದರೂ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಶಿವಮೊಗ್ಗ ಕ್ಷೇತ್ರದ ಮತದಾರರರು ಮತನೀಡಬಾರದು ಎಂದು ಮನವಿ ಮಾಡಿದರು. ಅಭ್ಯರ್ಥಿ ಗೀತಾ ಮಾತನಾಡಿ, ತಾವು ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರಾದ್ದರಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅರಿವಿದೆ. ಅದರ ಪರವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಲಾಗುವುದು. ತಮ್ಮ ತಂದೆಯವರು ಜಿಲ್ಲೆ ಹಾಗೂ ರಾಜ್ಯದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಶಾಸಕ ಅಪ್ಪಾಜಿ ಅವರೊಂದಿಗೆ ಸೇರಿ ಕ್ಷೇತ್ರದ ಜನತೆಗೆ ತಿಳಿಸಿ ಮತಯಾಚನೆ ಮಾಡುವುದಾಗಿ ತಿಳಿಸಿದರು.
ಣಾಮೂರ್ತಿ, ನಟರಾಜ್, ರಾಮಕೃಷ್ಣ, ಆನಂದ್, ಭಾಗ್ಯಶ್ರೀ, ಗುಣಶೇಖರ, ಬದರೀನಾರಾಯಣ, ಸುಧಾಮಣಿ ಮತ್ತು ಮಾಜಿ ಜಿ.ಪಂ. ಸದಸ್ಯ ಯೋಗೇಶ್ ಮೊದಲಾದವರು ಉಪಸ್ಥಿತರಿದ್ದರು.