ಶಿವಣ್ಣನ ಮೇಲಿನ ಅಭಿಮಾನದಿಂದ ಪ್ರಚಾರ: ಉಪೇಂದ್ರ
ಶಿವಮೊಗ್ಗ: ಸ್ವತಃ ರಾಜಕೀಯ ಆಕಾಂಕ್ಷೆ ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ಪರ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾನುವಾರ ಇಡೀ ದಿನ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅವರ ಪರ ಪ್ರಚಾರ ನಡೆಸಿರುವ ಉಪೇಂದ್ರ “ÌÈÚy| ಅವರ ಮೇಲಿನ ಅಭಿಮಾನದಿಂದ ಪ್ರಚಾರಕ್ಕೆ ¶M¦¥æ§Þ«æ’ ಎಂದರೂ ಸಹ ಬೇರೆ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗುವುದನ್ನು ನಿರಾಕರಿಸಲಿಲ್ಲ.
ಮತ್ತೊಂದು ದಿನ ಪ್ರವಾಸಕ್ಕೆ ಹೊರಟಿದ್ದ ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಗಳಿಗೆ ಜಾಣ್ಮೆಯಿಂದಲೇ ಉತ್ತರಿಸಿದರು. ನಿಮ್ಮಲ್ಲಿ ಇನ್ನೂ ಗೊಂದಲ ಇದೆಯೇ ಎಂದು ಕೇಳಿದಾಗ, ಕನ್ಫ್ಯೂಜನ್ ಯಾರಿಗಿಲ್ಲ, ಇಡೀ ದೇಶವೇ ಕನ್ಫ್ಯೂಜನ್ನಲ್ಲಿದೆ ಎಂದು “¶ß¦ªÈÚM}Ú’ÁÛ¥ÚÁÚß.
ಗೀತಾ ಶಿವರಾಜಕುಮಾರ್ ಅವರನ್ನು ಏಕೆ ಜನರು ಬೆಂಬಲಿಸಬೇಕು ಎನ್ನುವುದಕ್ಕೂ ಅವರ ಬಳಿ ಕಾರಣವಿದೆ. ಸಮಾಜಸೇವೆ ಎಂಬ ಮಾತೇ ಕಾಣುತ್ತಿಲ್ಲ. ಆದರೆ, ಗೀತಕ್ಕ ಅವರು ಹಣಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂದು ಬಂದಿದ್ದಾರೆ. ಇದೊಂದೇ ವಿಷಯ ಸಾಕು ಅವರನ್ನು ಬೆಂಬಲಿಸಲು ಎಂದರು.
ನಾನು ಗೀತಾ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆಯೇ ಹೊರತು ಪಕ್ಷದ ಪರವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬೇರೆ ಯಾರೂ ನನಗೆ ಆಹ್ವಾನಿಸಿಲ್ಲ. ಆ ಬಗ್ಗೆ ಚಿಂತಿಸಿಲ್ಲ ಎಂದರು.
ಬಿಎಸ್ವೈ ಪರ ಬ್ಯಾಟಿಂಗ್: ಯಡಿಯೂರಪ್ಪ ಅವರ ಪರ ಬ್ಯಾಟಿಂಗ್ ಮಾಡಿದ ಉಪೇಂದ್ರ, ನಾನು ಯಾವ ಪಕ್ಷದ ವಿರುದ್ಧವೂ ಅಲ್ಲ. ಯಡಿಯೂರಪ್ಪ ಅವರ ವಿರುದ್ಧ ಆರೋಪ ಬಂದಿರಬಹುದು. ಆದರೆ, ಅವರು ಅಪರಾಧಿ ಅಲ್ಲ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ವೈಯಕ್ತಿಕವಾಗಿ ಮಾತನಾಡುವುದಿಲ್ಲ ಎಂದರು.
ರಾಜಕೀಯ ಆಕಾಂಕ್ಷೆ: ನನಗೂ ರಾಜಕೀಯ ಆಕಾಂಕ್ಷೆಗಳಿವೆ. ನಾನು ರಾಜಕೀಯ ಪ್ರವೇಶಿಸುತ್ತೇನೆ. ಆದರೆ ಈಗಲ್ಲ. ಐದು ವರ್ಷ ಕಾದು ನೋಡಿ ಎಂದು 'ಸೂಪರ್' ಎಂಬ ರಾಜಕೀಯ ಸಿನಿಮಾವನ್ನೂ ನಿರ್ದೇಶಿಸಿರುವ ಉಪೇಂದ್ರ ಹೇಳಿದ್ದಾರೆ.
ಗೀತಾ ಶಿವರಾಜಕುಮಾರ್ ಪರ ಪ್ರಚಾರಕ್ಕೆ ಏಕೆ ಬಂದಿದ್ದೀರಿ?
- ಸಿನಿಮಾರಂಗದ ಅಪರಂಜಿ ಶಿವಣ್ಣ. ಗೀತಾ ಅವರು ಪುಣ್ಯಕೋಟಿ. ಈ ಶಿವ- ಪಾರ್ವತಿಯರ ಮೇಲಿನ ಅಭಿಮಾನದಿಂದ ಬಂದಿದ್ದೇನೆ. ಹಾಗೆ ನೋಡಿದರೆ ನನಗೆ ಬೇರೆ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಯಡಿಯೂರಪ್ಪ ನನಗೆ ಬೇಕಾದವರು. ಎಚ್.ಡಿ. ಕುಮಾರಸ್ವಾಮಿ, ರೇವಣ್ಣ, ಬಿಜೆಪಿಯ ಅನಂತಕುಮಾರ್ ಗೊತ್ತು. ಕಾಂಗ್ರೆಸ್ ಪಕ್ಷದಲ್ಲೂ ಮಿತ್ರರಿದ್ದಾರೆ.
ಹಾಗಾದರೆ ನೀವು ಯಡಿಯೂರಪ್ಪ ಅವರು ಪ್ರಚಾರಕ್ಕೆ ಬನ್ನಿ ಎಂದು ಕರೆದರೆ ಒಪ್ಪುತ್ತೀರಾ?
- ಈಗ ಅವರು ನನ್ನನ್ನು ಕರೆಯೋಲ್ಲ ಅನಿಸುತ್ತೆ.
ರಮ್ಯಾ ಪರ ಪ್ರಚಾರ ಮಾಡುವ ಯೋಚನೆ ಇದೆಯೇ?
- ಅವರೇ ಸೂಪರ್ ಸ್ಟಾರ್. ಮತ್ತೊಬ್ಬ ಸ್ಟಾರ್ ಅವರಿಗೆ ಏಕೆ ಆದರೂ ಅವರು ಕರೆದರೆ ಖಂಡಿತಾ ಹೋಗುತ್ತೇನೆ.
ಪ್ರಚಾರಕ್ಕೆ ರವಿಚಂದ್ರನ್, ರಾಗಿಣಿ, ಲೂಸ್ ಮಾದ: ಶಿವರಾಜ್
ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ಪರ ಸ್ಯಾಂಡಲ್ವುಡ್ನ ಇನ್ನಷ್ಟು ತಾರೆಯಲು ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಟ ಶಿವರಾಜಕುಮಾರ್, ಸಮಯ ಇನ್ನೂ ನಿಗದಿಯಾಗಲಿದೆ. ರವಿಚಂದ್ರನ್, ಅಮೂಲ್ಯ, ಯೋಗೀಶ್, ರಾಗಿಣಿ, ಶ್ರೀಮುರಳಿ, ಯಶ್ ಬರಲಿದ್ದಾರೆ ಎಂದರು.
ಪುನೀತ್ ಅವರ ಬಗ್ಗೆ ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ಪ್ರಚಾರಕ್ಕೆ ಕರೆದಿದ್ದೇವೆ. ಅವರು ಬೇರೆಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಚಿಂತನೆಗಳೇ ಬೇರೆ ಇವೆ. ರಾಜ್ಕುಮಾರ್ ಅವರ ಮೂವರು ಮಕ್ಕಳು ಒಂದೇ ರೀತಿ ಯೋಚಿಸಬೇಕೆಂದು ಬಯಸುವುದು ಸರಿ ಅಲ್ಲ ಎಂದರು.
ನಿಮ್ಮ ಮೂರನೇ ಕಣ್ಣು ಯಾವಾಗ ತೆರೆಯುತ್ತೀರಿ ಎಂದು ಕೇಳಿದಾಗ, ಈ ಮಾತನ್ನು ನಾನು ಬೇರೆ ಸಂದರ್ಭದಲ್ಲಿ ಹೇಳಿದ್ದೆ. ಇಲ್ಲಿಗೆ ಅದು ಅನ್ವಯವಾಗುವುದಿಲ್ಲ ಎಂದರು. ಆಗ ಉಪೇಂದ್ರ, ನಾನೇ ಶಿವಣ್ಣನ ಮೂರನೇ ಕಣ್ಣು ಎಂದು ಚಟಾಕಿ ಹಾರಿಸಿದರು.
ದರ್ಶನ್ ಹಾಗೂ ಸುದೀಪ್ ಅವರನ್ನು ಸಂಪರ್ಕಿಸಿದ್ದೇವೆ. ಅವರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಗೋಷ್ಠಿಯಲ್ಲಿದ್ದ ನಟಿ ಸಂಜನಾ, ಚುನಾವಣಾ ಪ್ರಚಾರ ಒಳ್ಳೆಯ ಅನುಭವ. ಜನರ ಕಣ್ಣಲ್ಲಿ ಗೀತಾ ಪರ ಪ್ರೀತಿ ಕಾಣುತ್ತಿತ್ತು ಎಂದರು.