ಅನ್ನಭಾಗ್ಯ ಅಕ್ಕಿ ವಶ
ಶಿವಮೊಗ್ಗ: ಏಪ್ರಿಲ್ 5ರಂದು ಬಿ.ಪಿ.ಎಲ್. ಕಾರ್ಡ್ಪ್ಡೆದ ಫಲಾನುಭವಿಗಳು ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುತ್ತಿರುವುದನ್ನು ಶಿವಮೊಗ್ಗ ನಗರದ ಅನೌಪಚಾರಿಕ ಪಡಿತರ ಕಚೇರಿಯ ಸಹಾಯಕ ನಿರ್ದೇಶಕರು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ತಮ್ಮ ಕಚೇರಿ ಆಹಾರ ನಿರೀಕ್ಷಕರೊಂದಿಗೆ ಮಧ್ಯಾಹ್ನ 2ಗಂಟೆ ಸಮಯದಲ್ಲಿ ಅಣ್ಣಾನಗರ ಬಡಾವಣೆಯ 7ನೇ ಕ್ರಾಸ್ನಲ್ಲಿ ತನಿಖೆ ಮಾಡಿದಾಗಿ ಮಲೇಖಾ ಕೋಂ ಮುನ್ನ ಎಂಬುವವರು ಬಿ.ಪಿ.ಎಲ್. ಕಾರ್ಡ್ದಾರರಿಂದ ಕಾಳಸಂತೆಯಲ್ಲಿ ಖರೀದಿ ಮಾಡಿದ 8 ಕ್ವಿಂಟಾಲ್ 40 ಕೆಜಿ ಅಕ್ಕಿಯನ್ನು ಹಾಗೂ ಇದೇ ವ್ಯಕ್ತಿ ಮಿಳಘಟ್ಟ 3ನೇ ಕ್ರಾಸ್ಣನಲ್ಲಿರುವ ತಮ್ಮ ಮನೆಯಲ್ಲಿ ಬಿ.ಪಿ.ಎಲ್. ಕಾರ್ಡ್ದಾರರಿಂದ ಕಾಳಸಂತೆಯಲ್ಲಿ ಖರೀದಿಮಾಡಿ ದಾಸ್ತಾನು ಮಾಡಲಾಗಿದ್ದ 49 ಕ್ವಿಂಟಾಲ್ ಅಕ್ಕಿ ಹಾಗೂ 20 ಕೆಜಿ ಗೋಧಿಯನ್ನು ಒಟ್ಟು 57 ಕ್ವಿಂಟಾಲ್ 50ಕೆಜಿ ಅಕ್ಕಿ ಹಾಗೂ 20ಕೆಜಿ ಗೋಧಿಯನ್ನು ಪತ್ತೆಹಚ್ಚಿ ಅವಶ್ಯಕ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಲಾಗಿದೆ.