ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೀವನಪೂರ್ತಿ ಒತ್ತಡದ ಜೀವನ: ಡಾ.ವೀಣಾ ಭಟ್

Rashmi Kasaragodu
Updated On : 9 Apr 2014, 10:32 am

ಭದ್ರಾವತಿ: ಬಾಲ್ಯವಾಸ್ಥೆಯಿಂದ ವೃದ್ಧಾಪ್ಯದವರೆಗೂ ಒತ್ತಡಮಯ ಜೀವನವನ್ನೇ ನಡೆಸುತ್ತೇವೆಂದು ಖ್ಯಾತ ಸ್ತ್ರೀರೋಗತಜ್ಞೆ ಹಾಗೂ ಪ್ರಸೂತಿತಜ್ಞೆ ಡಾ. ವೀಣಾಭಟ್ ನುಡಿದರು.
ಪಟ್ಟಣದ ನಯನ ಆಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಹಾಗೂ ಗರ್ಭಿಣಿ ಸ್ತ್ರೀಯರ ಯೋಗ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ತಾಯ್ತನವು ಮಹಿಳೆಯ ಜೀವನದಲ್ಲಿ ಒಂದು ಒತ್ತಡದ ಹಂತವೇ ಎಂದು ತಿಳಿಸಿದರು.
ತಾಯ್ತನದ ಒತ್ತಡದ ಹಂತವನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಬ್ಬ ಮಹಿಳೆಯೂ ಪೌಷ್ಟಿಕವಾದ ಸಮತೋಲನ ಆಹಾರ ಸೇವಸಬೇಕು. ಭಾವನಾತ್ಮಕ ದೃಢತೆಯನ್ನು ಸಾಧಿಸಲು ಪ್ರತಿನಿತ್ಯ ಯೋಗ, ಪ್ರಾಣಾಯಾಮ ಮತ್ತಿತರ ದೈಹಿಕ ಚಟುವಟಿಕೆಗಳನ್ನು ಮಾಡಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಒಳ್ಳೆಯ ಸಾಹಿತ್ಯಗಳನ್ನು ಓದಬೇಕೆ. ದಿನಕ್ಕೆ ಕನಿಷ್ಠ 6ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೈಂಟ್ ಜೋಸೆಫ್ ಆಂಗ್ಲ ಶಾಲೆಯ ಪ್ರಾಂಶುಪಾಲರಾದ ಲತಾ ರಾಪರ್ಟ್ ಗರ್ಭಿಣಿ ಸ್ತ್ರೀಯರು ಸದ್ಗುಣವುಳ್ಳ ಆರೋಗ್ಯವಂತ ಶಿಶುವನ್ನು ಹಡೆಯುತ್ತೇನೆಂಬ ಧನಾತ್ಮಕ ನಿಲವನ್ನು ಹೊಂದಿರಬೇಕೆಂದರು.
ವಿಶ್ವ ಆರೋಗ್ಯ ದಿನಾಚರಣೆಯಂದು ಒತ್ತಡ ರಹಿತ ಜೀವನ ನಡೆಸುತ್ತೇವೆಂಬ ಸಂಕಲ್ಪ ತೊಟ್ಟು ಅದರಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement