ಜೆಡಿಎಸ್ ಮುಗಿದ ಅಧ್ಯಾಯ: ಜೆಡಿಯು ಅಭ್ಯರ್ಥಿ ಧರ್ಮಪ್ಪ
ಶಿವಮೊಗ್ಗ: ಜೆಡಿಎಸ್ ಮುಗಿದು ಹೋದ ಪಕ್ಷ. ಇದೀಗ ಸಿನಿಮಾದ ಗುಂಗಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಇವರನ್ನು ಜನ ಗೆಲ್ಲಿಸಬೇಕೆ. ಅದೇ ರೀತಿ ಜೈಲಿಗೆ ಹೋಗಿಬಂದ ಯಡಿಯೂರಪ್ಪನವರನ್ನು ಜನರು ಗೆಲ್ಲಿಸುತ್ತಾರೆಯೇ ಎಂದು ಜೆಡಿಯು ಅಭ್ಯರ್ಥಿ ಧರ್ಮಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವವಿದೆ. ಆದರೆ, ಅವರು ಏನೂ ಮಾಡದೇ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇಂತಹವರಿಂದ ಕ್ಷೇತ್ರಕ್ಕೆ ಏನು ನಿರೀಕ್ಷಿಸಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.
ತಂದೆ ಹೆಸರಿನಲ್ಲಿ ಕಣಕ್ಕಿಳಿದಿರುವ ಜೆಡಿಎಸ್ ಅಭ್ಯರ್ಥಿ, ತಂದೆ ಹೆಸರಿನಲ್ಲಿ ವೋಟು ಕೇಳುತ್ತಿದ್ದಾರೆ. ಅವರು ಗೆದ್ದರೆ ಯಾರಿಗೆ ಕೆಲಸ ಮಾಡಿಕೊಡುತ್ತಾರೆ ಎಂದು ಲೇವಡಿ ಮಾಡಿದರಲ್ಲದೇ, ಜೆಡಿಎಸ್‌ನ ಭದ್ರಕೋಟೆ ಎಂದು ಭಾವಿಸಿದಂತಿದೆ. ಆದರೆ ಜೆಡಿಎಸ್ ಮುಗಿದ ಅಧ್ಯಾಯ ಎಂದು ಹೇಳಿದರು.
ಜೆಡಿಯುಗೆ ಭಾರೀ ಜನಬೆಂಬಲವಿದೆ. ಪ್ರಚಾರಕ್ಕೆಂದು ಹೋದಲ್ಲೆಲ್ಲಾ ಬೆಂಬಲ ವ್ಯಕ್ತವಾಗುತ್ತಿದೆ. ಜನ ಬದಲಾವಣೆ ನಿರೀಕ್ಷಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಹಲವರಿದ್ದರು.