ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ನಾನು ಕಾಂಗ್ರೆಸ್ ನಿಷ್ಠ'

Rashmi Kasaragodu
Updated On : 9 Apr 2014, 10:29 am

ಭದ್ರಾವತಿ: ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಅವರು ತಮ್ಮ ಸಹಮತ ಕಾಂಗ್ರೆಸ್ ಪಕ್ಷಕ್ಕೆ ಎಂದು ದೃಢಪಡಿಸಿದ್ದಾರೆ.
ಕರ್ನಾಟಕದ ಮಾಜಿ ಹಜ್ ಮತ್ತು ವಕ್ಫ್ ಸಚಿವ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಮೀರ್ ಅಹಮದ್‌ಖಾನ್ ಅವರು ಸೋಮವಾರ ರಾತ್ರಿ ಸಂಗಮೇಶ್ವರ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ತಾವೊಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಕಾಂಗ್ರೆಸ್ ಪಕ್ಷ ತಮ್ಮನ್ನು ಸೇರಿಸಿಕೊಳ್ಳಲಿ ಅಥವಾ ಬಿಡಲಿ ತಾವು ಕಾಂಗ್ರೆಸ್ ಪಕ್ಷದ ಪರ ಎಂದು ಜಮೀರ್ ಅಹಮದ್ ಅವರಿಗೆ ಉತ್ತರ ನೀಡಿದುದಾಗಿ ಸಂಗಮೇಶ್ವರ 'ಕನ್ನಡಪ್ರಭ' ಕ್ಕೆ ತಿಳಿಸಿದ್ದಾರೆ.
ನಾನು ಮತ್ತು ಜಮೀರ್ ಅಹಮದ್ ಬಹಳ ಹತ್ತಿರದಿಂದ ಗೆಳಯರು ನಿಜ. ಆದರೆ, ರಾಜಕೀಯದ ವಿಷಯದಲ್ಲಿ ಅವರು ಜೆಡಿಎಸ್ ಪಕ್ಷದ ಮುಖಂಡರಾದರೆ ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ ಎಂದು ತಿಳಿಸಿದ್ದಾರೆ.
 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement