ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೋದಿ ಜಪ ಮಾಡಿದರೆ ತಪ್ಪೇನು?: ಶ್ರೀನಿವಾಸ ಪೂಜಾರಿ

Rashmi Kasaragodu
Updated On : 9 Apr 2014, 10:29 am

ಕ.ಪ್ರ.ವಾರ್ತೆ, ಸಾಗರ, ಏ.8: ಕಾಂಗ್ರೆಸ್‌ನವರು ಸ್ವಾತಂತ್ರ್ಯ ಬಂದ ನಂತರ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಜಪ ಮಾಡಿಕೊಂಡು ಬಂದಿದ್ದಾರೆ. ಈಗ ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿಯವರು ನರೇಂದ್ರ ಮೋದಿ ಜಪ ಮಾಡಿದರೆ ಏನು ತಪ್ಪು ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅಲೆಯನ್ನು ನೋಡಿ ದಿಕ್ಕೆಟ್ಟಿರುವ ಕಾಂಗ್ರೆಸ್ಸಿಗರು ಅನಗತ್ಯ ಆರೋಪ ಮಾಡುತ್ತಿದ್ದಾರೆ. ಮೋದಿಯವರಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಹಾಗೂ ಎಲ್ಲ ವರ್ಗದ ಹಿತ ಕಾಯಲು ಸಾಧ್ಯ ಎಂದರು.
ಗಿಮಿಕ್‌ಗೆ ಮರುಳಾಗದಿರಿ: ಚಲನಚಿತ್ರ ನಟರು ಬಂದು ಗಿಮಿಕ್ ಶೋ ನೀಡಿದ ತಕ್ಷಣ ಮತದಾರರು ಮರಳಾಗಬಾರದು. ಏಕೆಂದರೆ ಸೌಲಭ್ಯ ಕಲ್ಪಿಸಲು ಯಾವ ಚಲನಚಿತ್ರ ನಟರೂ ಸಿಗುವುದಿಲ್ಲ.
 ಮುಖ್ಯಮಂತ್ರಿಯಾದಾಗಿನಿಂದ ಈತನಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತೊಡಗಿಸಿಕೊಂಡವರು ಯಡಿಯೂರಪ್ಪ ಮಾತ್ರ ಎಂದರು.
ಬಿ.ಆರ್. ಜಯಂತ್, ಚೇತನರಾಜ್, ನಾಗರಾಜ್, ವ.ಶಂ. ರಾಮಚಂದ್ರ ಭಟ್, ಸುನಿಲ್ ರೊನಾಲ್ಡೋ,  ಶ್ರೀನಿವಾಸ ಮೇಸ್ತ್ರಿ, ಎಸ್.ಕೆ. ವಾಸುದೇವ ಸೇರಿದಂತೆ ಈ ಸಂದರ್ಭದಲ್ಲಿ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement