ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿವರಾಜ್ ಕುಮಾರ್ ಉಪೇಂದ್ರ, ರೋಡ್ ಶೋ

Rashmi Kasaragodu
Updated On : 9 Apr 2014, 10:28 am

ಸಾಗರ: ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರವಾಗಿ ಚಲನಚಿತ್ರ ನಟರಾದ ಉಪೇಂದ್ರ ಹಾಗೂ ಶಿವರಾಜಕುಮಾರ್ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು. ಶಾಸಕ ಮಧು ಬಂಗಾರಪ್ಪ, ಪ್ರಮುಖ ಶ್ರೀಪಾದ ನಿಸ್ರಾಣಿ, ಬಸವರಾಜಗೌಡ ಬೈದೂರು, ಜಾಕೀರ್, ಕೆ.ಎಚ್. ಅಣ್ಣಪ್ಪ, ಲೋಕೇಶ ಗಾಳಿಪುರ ಹಾಜರಿದ್ದರು.
ನಾಲ್ಕು ಗಂಟೆ ಕಾದ ಜನ: ಚಲನಚಿತ್ರ ನಟ ಶಿವರಾಜಕುಮಾರ್ ಹಾಗೂ ಉಪೇಂದ್ರ ರೋಡ್ ಶೋ ನಡೆಸುತ್ತಾರೆ ಎನ್ನುವ ಮಾಹಿತಿ ಆಧರಿಸಿ ಸಾಗರ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಜನರು ಸಂಜೆ 4 ಗಂಟೆಯಿಂದಲೇ ಸೊರಬ ರಸ್ತೆ, ಜೆ.ಸಿ.ರಸ್ತೆ, ಮಾರಿಕಾಂಬಾ ರಸ್ತೆ ಹಾಗೂ ಅಶೋಕ ರಸ್ತೆಗಳಲ್ಲಿ ಜಮಾಯಿಸಿದ್ದರು. ಆದರೆ ಚಲನಚಿತ್ರ ನಟರು ಸಾಗರಕ್ಕೆ ಬರುವಾಗ ರಾತ್ರಿ 8 ಗಂಟೆಯಾಗಿತ್ತು. ಇದರಿಂದ ಸಾಕಷ್ಟು ಜನರು ಕಾದು ಬೇಸತ್ತು ಮನೆಗೆ ಹೋಗಿದ್ದು ಕಂಡು ಬಂತು.
  ತಿಲಕ್ ರಸ್ತೆ ಏಕಮುಖ ಸಂಚಾರದ ಮಾರ್ಗವಾಗಿತ್ತು. ಪೊಲೀಸರು ಹಾಗೂ ಚುನಾವಣಾ ಆಯೋಗದವರು ನೆರೆದಿದ್ದರೂ ವಾಹನ ತಡೆದು ನಿಲ್ಲಿಸುವ ಕೆಲಸ ಮಾಡಲಿಲ್ಲ.
  ಸಂಜೆ 4 ಗಂಟೆಯಿಂದ ನೋಡಲು ಕಾದಿದ್ದ ಅಭಿಮಾನಿಗಳಿಗೆ ಮಾತ್ರ ಕತ್ತಲಿನಲ್ಲಿ ನೋಡಲು ಸಾಧ್ಯವಾಗದೆ ನಿರಾಸೆ ಅನುಭವಿಸುವಂತೆ ಆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement