ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಧು ತಂದೆ ಹಾದಿಯಲ್ಲಿಯೇ ನಡೆಯುತ್ತೇನೆಂದು ಹೇಳಿದ್ದು ದುರಂತ

Mainashree
Updated On : 10 Apr 2014, 11:03 am

ಸೊರಬ: ತಾವೂ ಕೂಡಾ ತಂದೆಯವರ ಹಾದಿಯಲ್ಲೇ ತಾಲೂಕನ್ನು ಕೊಂಡೊಯ್ಯುತ್ತೇವೆ ಎಂದು ಲೋಕಸಭಾ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಶಾಸಕ ಮಧುಬಂಗಾರಪ್ಪ ಮತ ಯಾಚಿಸುತ್ತಿರುವದು ತಾಲೂಕು ರಾಜಕಾರಣದ ದೊಡ್ಡ ದುರಂತ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಖೇದ ವ್ಯಕ್ತಪಡಿಸಿದರು.
ಮೂಗೂರು ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಸತತ 40 ವರ್ಷಕ್ಕೂ ಅಧಿಕ ಕಾಲ ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿದ ದಿ.ಬಂಗಾರಪ್ಪನವರು ಮುಖ್ಯಮಂತ್ರಿಯಾದರೂ ತಾಲೂಕನ್ನು ಅಭಿವೃದ್ಧಿಗೊಳಿಸದೆ ಹಿಂದುಳಿದ ತಾಲೂಕಿನ ಪಟ್ಟಿಗೆ ಸೇರಿಸಿದಂತೆ ಇವರ ವಾಗ್ದಾನವಲ್ಲವೇ ಎಂದು ವ್ಯಂಗ್ಯವಾಡಿದರು.
ಶಾಸಕರಾಗಿ ಹನ್ನೊಂದು ತಿಂಗಳಾದರೂ ಸರ್ಕಾರದಿಂದ ತಾಲೂಕಿಗೆ ಯಾವ ಅಭಿವೃದ್ಧಿ ಕಾರ್ಯಗಳೂ ಮಂಜೂರಾತಿ ಆಗಿವೆ ಎಂಬುದೇ ಗೊತ್ತಿಲ್ಲ. ಸಮರ್ಪಕವಾಗಿ ಕೆಡಿಪಿ ಸಭೆ ನಡೆಸದೆ ಅಧಿಕಾರಿಗಳೊಂದಿಗೆ ಚರ್ಚಿಸದೆ ಇರುವುದರಿಂದ ಕನ್ನಡ ಭವನ ನಿರ್ಮಾಣಕ್ಕೆ ಮಂಜೂರಾತಿಯಾಗಿದ್ದ 10 ಲಕ್ಷ ವಾಪಾಸಾಗುವುದರಲ್ಲಿದೆ. ಈ ಹಿಂದೆ ನಾವು ಮಂಜೂರು ಮಾಡಿಸಿದ ಕಾಮಗಾರಿಗಳನ್ನು ತಮ್ಮದೆಂದು ಹೇಳಿಕೊಳ್ಳುತ್ತಾ ನಡೆದಿದ್ದಾರೆ  ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement