ಮೋದಿ ಬ್ರಿಗೇಡ್ಗೆ ಪಾಠ ಕಲಿಸುವ ಹೊತ್ತು: ಕುಮಾರ
ತೀರ್ಥಹಳ್ಳಿ: ರಾಜಕಾರಣಕ್ಕೆ ಬೇಕಾಗಿರುವುದು ಅಭಿವೃದ್ಧಿ ಯೋಜನೆಗಳು. ಎಸ್.ಎಂ. ಕೃಷ್ಣ ಅವರದ್ದು ಬುದ್ಧೋಪದೇಶ. ಅವರ ಕಾರ್ಯವೈಖರಿಯಲ್ಲಿ ನೋಡಿ ಕಲಿಯುವಂಥದ್ದು ಬಹಳವಿದೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾರ್ಥದ ರಾಜಕಾರಣ ಜಿಲ್ಲೆಯಲ್ಲಿ ನಡೆಯುತ್ತಿದೆ. ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಹೆಸರಿಗೆ ಕಳಂಕ ತರಲಾಗುತ್ತಿದೆ. ಮಧು ಬಂಗಾರಪ್ಪ ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆ ಎಂದು ದೂರಿದರು.
ಮೋದಿ ಬ್ರಿಗೇಡಿಗೆ ಪಾಠ ಕಲಿಸುವ ಹೊತ್ತು ಬಂದಿದೆ ಎಂದು ಹೇಳಿದರು.
ತಮ್ಮ ಭಾಷಣಕ್ಕೂ ಮುನ್ನ ವೇದಿಕೆಯಲ್ಲಿದ್ದ ಹಿರಿಯರನ್ನು ನೆನೆದ ಕುಮಾರ್ ಬಂಗಾರಪ್ಪ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರ ಹೆಸರು ಮಾತ್ರ ಕೊನೆಯವರೆಗೂ ಹೇಳದಿದ್ದುದು ವಿಶೇಷವಾಗಿತ್ತು.