ಸುದ್ದಿ ಸಂಕ್ಷೇಪ
ಧನಾಂಜನೇಯ ವಾರ್ಷಿಕೋತ್ಸವ 14 ರಿಂದ
ಸೊರಬ: ತಾಲೂಕಿನ ಹೊಳೆಕೊಪ್ಪದ ಧನಾಂಜನೇಯ ಸ್ವಾಮಿಯ 14 ನೇ ವರ್ಷದ ವಾಷಿಕೋಕೋತ್ಸವ ಏ.14 ರಿಂದ 16 ರವರೆಗೆ ಜರುಗಲಿದೆ ಎಂದು ಧರ್ಮದರ್ಶಿ ರಾಮಪ್ಪ ಶೇಷನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏ. 14 ರ ಸೋಮವಾರ ಪಂಚಗವ್ಯ ಪುಣ್ಯಾಹ, ಸ್ಥಳ ಬಿಂಬ ಶುದ್ಧ, ಗುರು ಗಣಪತಿ ಪ್ರಾರ್ಥನೆ, ಮಹಾಸಂಕಲ್ಪ, ಪೂರ್ವಕ ವಾರ್ಷಿಕೋತ್ಸವ ಆರಾಧನೆ ಹಾಗೂ ಸಾಮೂಹಿಕ ಸತ್ಯನಾರಾಯಣ ವ್ರತ ಮತ್ತು ಅನ್ನಸಂತರ್ಪಣೆ. ರಾತ್ರಿ 8 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 15 ರ ಮಂಗಳವಾರ ಕಲಾತತ್ವ ಹವನ, ಹನುಮ ಮೂಲಮಂತ್ರ, ರಾಮತಾರಕ ವನ, ಆವರಣ ಬಲಿ, ಮಹಾ ಮಂಗಳಾರತಿ , ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಸಂಜೆ 4 ರಿಂದ ಸ್ವಾಮಿಯ ಪಲ್ಲಕ್ಕಿ ಉತ್ಸವ, ರಾತ್ರಿ ಮಹಾರಂಗ ಪೂಜೆ, ಬಲಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ರಾತ್ರಿ 8 ಕ್ಕೆ ಸಾಗರದ ಸ್ವರನಿಧಿ ತಂಡದವರಿಂದ ಸುಮಧುರ ಗೀತಾ ಕಾರ್ಯಕ್ರಮ ಹಾಗೂ 16 ರ ಬುಧವಾರ ಬೆಳಗ್ಗೆ ಪೂಜೆ, ಹವನ, ಪೂರ್ಣಾಹುತಿ, ಬಲಿ ಮಹಾಪೂಜೆ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಂಡಿನೋವಿಗೆ ಔಷಧ ಚಿಕಿತ್ಸೆ
ಭದ್ರಾವತಿ: ಪಟ್ಟಣದ ಹಳೇ ನಗರದಲ್ಲಿರುವ ಉದ್ಗೀತ ಆಯುರ್ವೇದ ಚಿಕಿತ್ಸಾಲಯ ಏ.11ರಿಂದ ಮೇ.15 ರ ವರೆಗೆ ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಉದ್ಗೀತ ಚಿಕಿತ್ಸಾಲಯದಲ್ಲಿ ಮಂಡಿನೋವು ಮತ್ತು ಇತರ ಸಂಧಿವಾತ ಚಿಕಿತ್ಸಾ ಶಿಬಿರ ಏರ್ಪಡಿಸಿದೆ. ಉಚಿತ ಸಲಹೆ ಹಾಗೂ ರಿಯಾಯಿತಿ ದರದಲ್ಲಿ ಆಯುರ್ವೇದ ಔಷಧಿಗಳನ್ನೂ ನೀಡಲಾಗುವುದು ಎಂದು ಚಿಕಿತ್ಸಾಲಯದ ತಿಳಿಸಿದೆ.
ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಕುಮಟಾದ ಸಿಂಡ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ ಸಹಯೋಗದೊಂದಿಗೆ ವಿವಿಧ ತರಬೇತಿ ಹಮ್ಮಿಕೊಂಡಿದೆ. ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಹೊಲಿಗೆ ತರಬೇತಿ (ವಸ್ತ್ರ ವಿನ್ಯಾಸ), ಹೈನುಗಾರಿಕೆ ತರಬೇತಿ ನೀಡಲು ಉದ್ದೇಶಿಸಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಸೊರಬ ತಾಲೂಕಿನ ನಿರುದ್ಯೋಗಿ ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಯು, ಸ್ವ ಉದ್ಯೋಗದಲ್ಲಿ ಆಸಕ್ತಿ ಹೊಂದಿದ್ದು, 18ರಿಂದ 45 ವರ್ಷದೊಳಗಿನವರಾಗಿರಬೇಕು. ಕನ್ನಡ ಓದು ಮತ್ತು ಬರಹ ಬಲ್ಲವರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಅರ್ಜಿಯನ್ನು ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗೆ ಸಲ್ಲಿಸುವಂತೆ ಕೋರಲಾಗಿದೆ. ಮಾಹಿತಿಗೆ ದೂ.08386-220530ನ್ನು ಸಂಪರ್ಕಿಸಿ.