ಎಲ್ಲ ಪಕ್ಷದಲ್ಲೂ ಬಂಗಾರಪ್ಪ ಅಭಿಮಾನಿಗಳಿದ್ದಾರೆ: ಮಧು
ಕ.ಪ್ರ.ವಾರ್ತೆ ್ಣ ಶಿವಮೊಗ್ಗ ್ಣ ಏ. 11
ಬಂಗಾರಪ್ಪ ಅವರ ಅಭಿಮಾನಿಗಳು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಇವರು ಹೋದ ಪಕ್ಷದಲ್ಲೆಲ್ಲಾ ನಾಯಕರನ್ನು ಬೆಳೆಸಿದ್ದಾರೆ. ಅವರೆಲ್ಲರೂ ಬಂಗಾರಪ್ಪ ಅವರ ಋಣ ತೀರಿಸುತ್ತೇವೆ ಎಂದಿದ್ದಾರೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಮಧು ಬಂಗಾರಪ್ಪ ಹೇಳಿದ್ದು, ಅವರು ಕಾಂಗ್ರೆಸ್ನಲ್ಲೂ ಇದ್ದಾರೆ. ಬಿಜೆಪಿಯಲ್ಲೂ ಇದ್ದಾರೆ ಎಂದರು.
ನಗರದಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು, ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದರು.
ಒಳ ಒಪ್ಪಂದ ಇಲ್ಲ: ಯಾವ ಪಕ್ಷದೊಂದಿಗೂ ನಾವು ಒಳಒಪ್ಪಂದ ಮಾಡಿಕೊಂಡಿಲ್ಲ. ಅವರಲ್ಲೇ ಕೆಲವರು ಬಂಗಾರಪ್ಪ ಅವರ ಮೇಲಿನ ಅಭಿಮಾನದಿಂದ ಬೆಂಬಲ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಬೇಳೂರು ಗೋಪಾಲಕೃಷ್ಣ ಅವರು ಹೇಳಿದಂತೆ ಬಂಗಾರಪ್ಪ ಅವರು ಎಲ್ಲರ ಆಸ್ತಿ ಖಂಡಿತಾ. ಆದರೆ ಬೇಕಾದಾಗ ಅವರನ್ನು ಬಳಸಿ, ನಂತರ ಕೈಬಿಟ್ಟವರಿಗೆ ಅವರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದರು. ಹಾಗೆ ನೋಡಿದರೆ ಗೋಪಾಲಕೃಷ್ಣ ಅವರು ಸ್ವಲ್ಪ ಮಟ್ಟಿಗೆ ನಮ್ಮ ಆಸ್ತಿಯೂ ಹೌದು ಎಂದರು. ಆದರೆ ಈ ಮಾತು ಹಾಲಪ್ಪ ಅವರಿಗೆ ಅನ್ವಯಿಸುವುದಿಲ್ಲ ಎಂದರು.
ಟೀಕೆ ಬೇಡ: ಮಹಿಳೆಯರಿಗೆ, ಕಲಾವಿದರಿಗೆ ಗೌರವ ಕೊಡುವುದು ಹೇಗೆಂದು ಬಿಜೆಪಿಗೆ ಗೊತ್ತಿಲ್ಲ. ಕಲಾವಿದರು ಭಾಗವಹಿಸದಿದ್ದರೆ ಗೋಕಾಕ್ ಚಳವಳಿ ಯಶಸ್ವಿಯಾಗುತ್ತಿತ್ತೇ, ಬರಗಾಲ, ಅತಿವೃಷ್ಠಿ ಸಂದರ್ಭದಲ್ಲಿ ಜನರ ಬಳಿ ಬಿಕ್ಷೆ ಬೇಡಿದ್ದಾರೆ. ನಾಡಿನ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದ ಅವರು, ಎಲ್ಲರಿಗೂ ಮತ ಕೇಳುವ ಹಕ್ಕು ಇದೆ. ಬಿಜೆಪಿ ಪರವಾಗಿ ನಟಿಯರಾದ ತಾರಾ, ಶೃತಿ ಮುಂತಾದವರು ಮತ ಕೇಳಿದ್ದಾರೆ. ದರ್ಶನ್ ಅವರು ಒಂದೆಡೆ ಕಾಂಗ್ರೆಸ್ ಪಕ್ಷಕ್ಕೆ, ಇನ್ನೊಂದೆಡೆ ಬಿಜೆಪಿ ಪರವಾಗಿ ಮತ ಯಾಚಿಸಿದ್ದಾರೆ. ಅದು ಅವರ ವೈಯಕ್ತಿಕ ಎಂದರು.