'ಶಕುಂತಲಾ ಬಂಗಾರಪ್ಪರನ್ನು ಪ್ರಚಾರಕ್ಕೆ ತರುವುದು ಸಲ್ಲ'
ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಸಾಧನೆ ಪರಿಗಣಿಸಿ ಈ ಬಾರಿ ಮತದಾರರು ಮಂಜುನಾಥ ಭಂಡಾರಿ ಅವರನ್ನು ಬೆಂಬಲಿಸಲಿದ್ದಾರೆ. ಇಡೀ ರಾಜ್ಯದಲ್ಲಿ ನಮಗೆ ಬಹುತೇಕ ಸ್ಥಾನಗಳು ಸಿಗಲಿವೆ ಎಂದು ಮಾಜಿ ಶಾಸಕ ಪಟಮಕ್ಕಿ ರತ್ನಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಮತದಾರರನ್ನು ತಲುಪುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಬದಿಗೆ ಸರಿದಿವೆ ಎಂದರು.
ಮಾನವೀಯ ವೌಲ್ಯವಿರುವ ರಾಜಕಾರಣ ಮರೆಯಾಗುತ್ತಿದೆ. ಪ್ರಸ್ತುತ ರಾಜಕಾರಣ ಜನರಲ್ಲಿ ಜಿಗುಪ್ಸೆ ತರಿಸುತ್ತಿದೆ. ಶಕುಂತಲಾ ಬಂಗಾರಪ್ಪ ಅವರು ಅನಾರೋಗ್ಯದಿಂದಿದ್ದು, ದೈಹಿಕ ಹಾಗೂ ಮಾನಸಿಕವಾಗಿ ಬಳಲಿರುವ ಅವರನ್ನು ಬಲವಂತವಾಗಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸರಿ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಲವರು ಆಕಾಂಕ್ಷಿಗಳಿದ್ದಾಗ ಭಿನ್ನಾಭಿಪ್ರಾಯಗಳು ಸಹಜ. ಟಿಕೆಟ್ ಕೇಳಲು ಎಲ್ಲರಿಗೂ ಅವಕಾಶವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸ್ವಾಮಿರಾವ್, ಮುಖಂಡರಾದ ಎಚ್.ಎಂ. ಸತ್ಯನಾರಾಯಣ, ಸತ್ಯನಾರಾಯಣ, ಸೈಯದ್ ವಾಹಿದ್ ಅಡ್ಡು ಇದ್ದರು.