ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಶಕುಂತಲಾ ಬಂಗಾರಪ್ಪರನ್ನು ಪ್ರಚಾರಕ್ಕೆ ತರುವುದು ಸಲ್ಲ'

Lingaraj Badiger
Updated On : 13 Apr 2014, 10:52 am

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಸಾಧನೆ ಪರಿಗಣಿಸಿ ಈ ಬಾರಿ ಮತದಾರರು ಮಂಜುನಾಥ ಭಂಡಾರಿ ಅವರನ್ನು ಬೆಂಬಲಿಸಲಿದ್ದಾರೆ. ಇಡೀ ರಾಜ್ಯದಲ್ಲಿ ನಮಗೆ ಬಹುತೇಕ ಸ್ಥಾನಗಳು ಸಿಗಲಿವೆ ಎಂದು ಮಾಜಿ ಶಾಸಕ ಪಟಮಕ್ಕಿ ರತ್ನಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾನವೀಯ ವೌಲ್ಯವಿರುವ ರಾಜಕಾರಣ ಮರೆಯಾಗುತ್ತಿದೆ. ಪ್ರಸ್ತುತ ರಾಜಕಾರಣ ಜನರಲ್ಲಿ ಜಿಗುಪ್ಸೆ ತರಿಸುತ್ತಿದೆ. ಶಕುಂತಲಾ ಬಂಗಾರಪ್ಪ ಅವರು ಅನಾರೋಗ್ಯದಿಂದಿದ್ದು, ದೈಹಿಕ ಹಾಗೂ ಮಾನಸಿಕವಾಗಿ ಬಳಲಿರುವ ಅವರನ್ನು ಬಲವಂತವಾಗಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸರಿ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸ್ವಾಮಿರಾವ್, ಮುಖಂಡರಾದ ಎಚ್.ಎಂ. ಸತ್ಯನಾರಾಯಣ, ಸತ್ಯನಾರಾಯಣ, ಸೈಯದ್ ವಾಹಿದ್ ಅಡ್ಡು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement