ಭದ್ರಾವತಿಯಲ್ಲಿ ಭಂಡಾರಿ ಪರ ಸಂಗಮೇಶ್ವರ ಪ್ರಚಾರ
ಕ.ಪ್ರ.ವಾರ್ತೆ, ಭದ್ರಾವತಿ, ಏ.13
ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಅವರ ಪರ ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಅವರು ತಮ್ಮ ಬೆಂಬಲಿಗರೊಂದಿಗೆ ಪಟ್ಟಣದ ಯಾಕಿನ್‌ಶಾ ಕಾಲೋನಿ ಮತ್ತಿತರ ಕಡೆಗಳಲ್ಲಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಹೊತ್ತ ಸಂಗಮೇಶ್ವರ ಮತ್ತು ಅವರ ಬೆಂಬಲಿಗರು ಗಾಂಧಿ ಟೋಪಿ ಮತ್ತು ಕಾಂಗ್ರೆಸ್ ರುಮಾಲು ಧರಿಸಿ ಮತಯಾಚನೆ ಮಾಡಿದರು.
ಪಕ್ಷದ ವರಿಷ್ಠರು ಸಂಗಮೇಶ್ವರ ಅವರಿಗೆ ಏ. 9ರಂದು ದೂರವಾಣಿಯ ಮೂಲಕ ಸಂಪರ್ಕಿಸಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ತಿಳಿಸಿದ್ದಾರೆಂದು ಸಂಗಮೇಶ್ವರ ಸುದ್ದಿಗಾರರಿಗೆ ತಿಳಿಸಿ ಶನಿವಾರದಿಂದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಪರವಾಗಿ ಮತಯಾಚನೆ ಮಾಡತೊಡಗಿದ್ದಾರೆ. ಭಾನುವಾರ ಸಹ ಅವರ ಬೆಂಬಲಿಗರೊಂದಿಗೆ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.