ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ತಂದೆಯ ಕನಸು ಸಾಕಾರಕ್ಕೆ ಮತ ನೀಡಿ: ಗೀತಾ

Lingaraj Badiger
Updated On : 15 Apr 2014, 10:32 am

ಹೊಸನಗರ: ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಅಭಿವೃದ್ಧಿ ಪರ ಯೋಜನೆಗಳ ಕನಸು ಸಾಕಾರಗೊಳಿಸಲು ತಮ್ಮನ್ನು ಬೆಂಬಲಿಸುವಂತೆ ಲೋಕಸಭಾ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮನವಿ ಮಾಡಿದರು.
ಪಟ್ಟಣದಲ್ಲಿ ಸೋಮವಾರ ರೋಡ್ ಶೋ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡಿದರು.
ಬೇರೆ ಪಕ್ಷದ ಅಭ್ಯರ್ಥಿಗಳನ್ನು ದೂರು ಪ್ರಶ್ನೆ ಇಲ್ಲ. ಬಂಗಾರಪ್ಪ ಇವರ ಆರಾಧನ, ಆಶ್ರಯ, ಅಕ್ಷಯ, ಯೋಜನೆಗಳನ್ನು ನಂತರ ಬಂದ ಸರ್ಕಾರಗಳು ಮರೆತಿದೆ. ತಮ್ಮ ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದಲ್ಲಿ ಅವುಗಳಿಗೆ ಮರು ಚಾಲನೆ ನೀಡುವುದಾಗಿ ಭರವಸೆ ನೀಡಿದರು.
ಚಿತ್ರ ನಟ ಶಿವರಾಜ್‌ಕುಮಾರ್ ಮಾತನಾಡಿ, ತಮ್ಮ ಪತ್ನಿ ಹೊರಗಿನವರು ಎಂದು ವಿರೋಧ ಪಕ್ಷದವರು ಬಿಂಬಿಸಲಾಗುತ್ತಿದೆ. ಇದೇ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದ ಗೀತಾ ಇವರಿಗೆ ಮತ ನೀಡುವಂತೆ ಕೋರಿದರು. ಚಲನ ಚಿತ್ರ ನಟರಾದ ವಿಜಯ ರಾಘವೇಂದ್ರ, ಚಿತ್ರ ಮುರಳಿ ಗೀತಾ ಪರ ಮತ ಯಾಚನೆ ಮಾಡಿ ಮಾತನಾಡಿದರು.
ಜೆಡಿಎಸ್ ಪ್ರಮುಖರಾದ ಕೆ.ಎಂ. ಕೃಷ್ಣಮೂರ್ತಿ, ಬಿ.ಜಿ. ನಾಗರಾಜ್, ಚಾಬು ಸಾಬ್, ವರ್ತೇಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement