ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಲ್ಲೂ ಹೋಗಲ್ಲ, ಇಲ್ಲೇ ಇರ್ತೀನಿ: ಗೀತಾ

Lingaraj Badiger
Updated On : 16 Apr 2014, 11:44 am

ಶಿವಮೊಗ್ಗ:  ನಾನು ಇಲ್ಲೇ ಇರ್ತೇನೆ. ಎಲ್ಲೂ ಹೋಗೋಲ್ಲ. ಸೊರಬದಲ್ಲಿ ಮನೆ ಇದೆ. ಬೇರೆಬೇರೆ ಕಡೆ ಸಂಬಂಧಿಗಳ ಮನೆಗಳಿವೆ. ಅದಕ್ಕಿಂತ ಹೆಚ್ಚಾಗಿ ಮತದಾರರ ಮನೆಗಳಿವೆ ಎಂದು ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದ್ದಾರೆ.
ಕೆಲವರು ಸುಮ್ಮನೇ ಊಹಾಪೋಹ ಹರಡುತ್ತಿದ್ದಾರೆ. ಚುನಾವಣೆ ಬಳಿಕ ನಾನು ಕ್ಷೇತ್ರದಲ್ಲಿರುವುದಲ್ಲ ಎನ್ನುತ್ತಿದ್ದಾರೆ. ಖಂಡಿತಾ ಈ ರೀತಿ ಮಾಡುವುದಿಲ್ಲ. ಚುನಾವಣೆ ನಂತರವೂ ಇಲ್ಲೇ ಇರುತ್ತೇನೆ. ಕ್ಷೇತ್ರದ ಜನತೆಯ ಪರವಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಬೇರೆ ರಾಜಕಾರಣಿಗಳಂತೆ ನಾನು ಭರವಸೆ ಕೊಟ್ಟು ಹೋಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ನನ್ನ ಎದುರಾಳಿಗಳು ಯಾರು ಎನ್ನುವುದು ಮುಖ್ಯ ಅಲ್ಲ. ತಂದೆ ಬಂಗಾರಪ್ಪ ಅವರು ಮಾಡಿದ ಕೆಲಸಗಳು ಮುಖ್ಯ.
ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಎಲ್ಲೆಡೆ ಪ್ರಚಾರ ಮಾಡಿದ್ದೇನೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜತೆಗೆ ನಾನು ಹೋದಲ್ಲೆಲ್ಲಾ ಜನರು ಊರಿನ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ. ಆದರೆ ಘಟ್ಟದ ಕೆಳಗಿನ ಸಮಸ್ಯೆಗಳು ಸ್ವಲ್ಪ ಭಿನ್ನವಾಗಿವೆ. ಇವೆಲ್ಲವನ್ನೂ ಬಗೆಹರಿಸಲು ಮತದಾನ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.

ಶಾಸಕ ಅಪ್ಪಾಜಿ ಮತಯಾಚನೆ
ಭದ್ರಾವತಿ:  ಏ.17ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬೀಳುವ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಶಾಸಕ ಎಂ.ಜೆ. ಅಪ್ಪಾಜಿ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಿ, ಕ್ಷೇತ್ರದಲ್ಲಿ ತಮ್ಮ ಕೈ ಬಲಪಡಿಸುವಂತೆ ಮತದಾರರನ್ನು ಕೋರಿದರು.
ರೋಡ್ ಶೋನಲ್ಲಿ ಜಿಡಿಎಸ್ ಅಭ್ಯರ್ಥಿ ಗೀತಾ, ಚಲನಚಿತ್ರ ನಟರಾದ ಶಿವರಾಜ್‌ಕುಮಾರ್, ಮುರಳಿ, ನಗರಸಭಾಧ್ಯಕ್ಷೆ ವಿಶಾಲಾಕ್ಷಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement