'ಅಂಬೇಡ್ಕರ್ ಎಲ್ಲ ವರ್ಗದ ನಾಯಕ'
ಜೋಗ್ಫಾಲ್ಸ್: ಡಾ. ಬಿ.ಆರ್. ಅಂಬೇಡ್ಕರ್ ಎಲ್ಲಾ ವರ್ಗದವರ ನಾಯಕ. ಅವರ ತತ್ವ, ಸಿದ್ಧಾಂತ ಎಂದೆಂದಿಗೂ ಪ್ರಸ್ತುತ. ಅವರ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಕಾರ್ಯನಿರ್ವಹಿಸಿದಾಗ ಅವರ ಆತ್ಮಕ್ಕೆ ಶಾಂತಿ ನೀಡಿದಂತಾಗುತ್ತದೆ ಎಂದು ಮುಖ್ಯ ಅಭಿಯಂತರ ಜಿ.ಹನುಮಂತಪ್ಪ ತಿಳಿಸಿದರು.
ಇಲ್ಲಿನ ಕೆಪಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕೆಪಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕೇಂದ್ರ ಸಮಿತಿ ಕಾರ್ಯದರ್ಶಿ ದೇವೇಂದ್ರ ನಾಯ್ಕ ಮಾತನಾಡಿದರು. ಅಧೀಕ್ಷಕ ಅಭಿಯಂತರ ಕೆ.ಆರ್.ಶಿವಾಜಿ, ಎನ್.ಮೋಹನ್ಮೂರ್ತಿ, ಲೆಕ್ಕಪತ್ರ ವಿಭಾಗದ ಸಹಾಯಕ ಪ್ರಧಾನ ಪ್ರಬಂಧಕ ಬಿ.ನಿಜೇಂದ್ರ, ಕಾರ್ಯನಿರ್ವಾಹಕ ಅಭಿಯಂತರ ಆರ್.ವಿ. ವೆಣೇಕರ್, ಡಿ.ಎಸ್. ಚನ್ನಬಸಣ್ಣ, ಡಾ. ಎಂ.ಚಂದ್ರಪ್ಪಗೌಡ, ಭದ್ರತಾ ವಿಭಾಗದ ಸಹಾಯಕ ಪ್ರಧಾನ ಪ್ರಬಂಧಕ ಚೌದರಿಪೆಂಟಯ್ಯ, ನಿಗಮದ ಹಿರಿಯ ಅಧಿಕಾರಿಗಳು, ಎಲ್ಲಾ ಯೂನಿಯನ್ ಪದಾಧಿಕಾರಿಗಳು, ಉದ್ಯೋಗಿಗಳು ಹಾಜರಿದ್ದರು.
ಕೆಪಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಆರ್.ನಿಂಗರಾಜು ಸ್ವಾಗತಿಸಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಎಸ್. ಸತೀಶ್ ವಂದಿಸಿದರು.