ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೇಣುಕಾಂಬ ದೇವಿಗೆ ವಿಶೇಷ ಪೂಜೆ

Rashmi Kasaragodu
Updated On : 17 Apr 2014, 10:30 am

ಸೊರಬ: ಇತಿಹಾಸ ಪ್ರಸಿದ್ಧ ಚಂದ್ರಗುತ್ತಿಯಲ್ಲಿ ದವನ ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ರೇಣುಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಳೆದ ತಿಂಗಳ ಜಾತ್ರೆ ಸಮಯದಲ್ಲಿ ಮಳೆ ಗಾಳಿ ಹೆಚ್ಚಾಗಿದ್ದರಿಂದ ಜಾತ್ರೆಗೆ ಆಗಮಿಸಿದ್ದ ಭಕ್ತರ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾಗಿತ್ತು. ಈ ಹುಣ್ಣಿಮೆಯಲ್ಲಿ ಹವಮಾನ ಉತ್ತಮವೆನಿಸಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ದೇವಿಗೆ ಹರಕೆ, ವಿವಿಧ ಸೇವೆಗಳನ್ನು ಭಕ್ತಿಪೂರ್ವಕವಾಗಿ ಸಲ್ಲಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡಿದ್ದರಿಂದ ವಾಸ್ತವ್ಯ ಹಾಗೂ ಶೌಚಾಲಯಕ್ಕಾಗಿ ಮಹಿಳೆಯರು ಮತ್ತು ಮಕ್ಕಳು ಪರದಾಡುವಂತಾಯಿತು. ಬಿಸಿಲು ಹೆಚ್ಚಾಗಿದ್ದು, ಕುಡಿಯುವ ನೀರು ಹಾಗೂ ನೆರಳಿಗಾಗಿ ಪರಿತಪಿಸುತ್ತಿದ್ದರು. ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಸಂಚಾರ ನಿಯಂತ್ರಣ ಅಸ್ತವ್ಯಸ್ತಗೊಂಡಿತ್ತು. ತ್ವರಿತಗತಿಯಲ್ಲಿ ಜನಪ್ರತಿನಿಧಿಗಳು ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹ ಇದೇ ವೇಳೆ ಸ್ಥಳೀಯ ಅನೇಕ ಮುಖಂಡರಿಂದ ಕೇಳಿಬಂತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement