ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಾರೋಹಿತ್ಲು, ಭೀಮನಕೆರೆಯಲ್ಲಿ ಮತದಾನ ವಿಳಂಬ

Mainashree
Updated On : 18 Apr 2014, 10:44 am

ಹೊಸನಗರ: ತಾಲೂಕಿನ ನಕ್ಸಲ್ ಪೀಡಿತ ಗ್ರಾಮ ಕೊರನಕೋಟೆಯಲ್ಲಿ ಮತದಾನಕ್ಕೆ ಗ್ರಾಮಸ್ಥರ ಬಹಿಷ್ಕಾರ. ಭೀಮನಕೆರೆ ಮತ್ತು ಹಾರೋಹಿತ್ಲು ಗ್ರಾಮದಲ್ಲಿ ಮತಯಂತ್ರ ದೋಷದಿಂದಾಗಿ ಮತದಾನ ವಿಳಂಬ. ಬಿಟ್ಟರೆ ತಾಲೂಕಿನಾದ್ಯಂತ ಶಾಂತಿಯುತ ಮತದಾನ ನಡೆಯಿತು.
ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ನಿಧಾನಗತಿಯ ಮತದಾನ ನಡೆದು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಅವಧಿಯಲ್ಲಿ ಸಾಕಷ್ಟು ಬೂತ್‌ಗಳಲ್ಲಿ ಚುನಾವಣಾ ಸಿಬ್ಬಂದಿ ಕೆಲಸವಿಲ್ಲದೆ ಕುಳಿತಿದ್ದು ಕಂಡುಬಂತು.
 ನಂತರ ಮತದಾನ ಬಿರುಸಿನ ಕೂಡಿತ್ತು. ಇದಕ್ಕೆ ಸುಡುಬಿಸಿಲು ಪ್ರಮುಖ ಕಾರಣವಾಗಿತ್ತು.
ಮತಗಟ್ಟೆ ಸಿಂಗಾರ: ಪ್ರತಿ ಹೋಬಳಿಯಲ್ಲಿ ಒಂದು ಮತಗಟ್ಟೆಯನ್ನು ಮಾದರಿ ಮತಕೇಂದ್ರವಾಗಿ ಗುರುತಿಸಲಾಗಿದ್ದು, ಆ ಮತಗಟ್ಟೆಗಳನ್ನು ತಳಿರು ತೋರಣದಿಂದ ಸಿಂಗರಿಸಿ, ಶಾಮಿಮಾನ, ಖುರ್ಚಿ ಹಾಕಿ ಮತ ಚಲಾಯಿಸಲು ಬರುತ್ತಿದ್ದ ಜನರನ್ನು ಉಪಚರಿಸುತ್ತಿದ್ದ ರೀತಿ ಗಮನಸೆಳೆಯಿತು.
ಮತದಾರರಿಗಾಗಿ ಮತಕೇಂದ್ರದಲ್ಲಿ ಸಹಾಯವಾಣಿ ಸೌಲಭ್ಯ ಒದಗಿಸಿದ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಕೆಲಸವಿಲ್ಲದಂತಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement