ಮಧ್ಯಂತರ ಸಂಗೀತ ಇಂದಿನಿಂದ
ಶಿವಮೊಗ್ಗ: ಇಲ್ಲಿನ ವಿದ್ಯಾಗಣಪತಿ ಸೇವಾ ಸಂಘವು ಏಪ್ರಿಲ್ 19ರಿಂದ ಮೂರು ದಿನಗಳ ಕಾಲ ಮಧ್ಯಂತರ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.
ರವೀಂದ್ರನಗರ ಬಲಮುರಿ ಗಣಪತಿ ದೇವಸ್ಥಾನ ಆವರಣದಲ್ಲಿ ಸಂಜೆ 6ರಿಂದ ಕಾರ್ಯಕ್ರಮದಲ್ಲಿ ನಡೆಯಲಿದ್ದು, ಚೆನ್ನೈ, ಬೆಂಗಳೂರು, ಹೈದ್ರಾಬಾದ್ ಕಲಾವಿದರು ಸಂಗೀತ ಸುಧೆ ಹರಿಸಲಿದ್ದಾರೆ.
ಏಪ್ರಿಲ್ 19ರಂದು ಚೆನ್ನೈನ ವಿ.ಪ್ರಸನ್ನ ವೆಂಕಟರಮಣ ಅವರು ಹಾಡುಗಾರಿಕೆ ಇದ್ದು, ವಿ.ಅನಂತಪದ್ಮನಾಭ(ಪಿಟೀಲು), ಸಿ.ಚೆಲುವರಾಜು(ಮೃದಂಗ), ಎನ್. ಗುರುಮೂರ್ತಿ(ಘಟಂ) ವಾದ್ಯ ಸಹಕಾರ ನೀಡುವರು.
ಏಪ್ರಿಲ್ 20ರಂದು ಜುಗಲ್ಬಂಧಿ ಗಾಯನವಿದ್ದು, ಬೆಂಗಳೂರಿನ ವಿ.ವಿನಯ ಶರ್ಮ(ಕರ್ನಾಟಕ ಸಂಗೀತ), ಕೌಶಿಕ್ ಐತಾಳ್(ಹಿಂದೂಸ್ತಾನಿ) ಕಾರ್ಯಕ್ರಮ ಪ್ರಸ್ತುತಪಡಿಸುವರು. ವಿ.ಅನಂತ ಪದ್ಮನಾಭ, ವಿ. ಶ್ರೀನಿವಾಸ, ಪಂ. ಸಮೀರ್ ಹವಾಲ್ದಾರ್, ಪಂ. ಗುರುತಮೂರ್ತಿ ವೈದ್ಯ ವಾದ್ಯ ಸಹಕಾರ ನೀಡುವರು.
21ರಂದು ಹೈದರಾಬಾದ್ನ ವಿ.ರಮ್ಯ ಮುರಳಿ ಮತ್ತು ಶಿವಮೊಗ್ಗದ ವಿ.ಕೃಪಾ ಶ್ರೀಕಾಂತ್ ಅವರಿಂದ ದ್ವಂದ್ವ ಹಾಡುಗಾರಿಕೆ ಇದ್ದು, ವಿ.ಆರ್. ದಯಾಕರ್(ಪಿಟೀಲು), ಸಿ.ಚೆಲುವರಾಜು (ಮೃದಂಗ), ಎನ್. ಗುರುಮೂರ್ತಿ(ಘಟಂ) ವಾದ್ಯ ಸಹಕಾರ ನೀಡುವರು.
ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿದ್ಯಾಗಣಪತಿ ಸೇವಾ ಸಮಿತಿ ಕೋರಿದೆ.