ಶ್ರೀನಿವಾಸ ಕಲ್ಯಾಣೋತ್ಸವ ನಾಳೆ
ಶಿವಮೊಗ್ಗ: ಇಲ್ಲಿನ ವಾಸವಿ ಮಹಿಳಾ ಸಂಘವು ಸಂಜೀವಿನಿ ಭಜನಾ ಮಂಡಳಿ ಸಹಯೋಗದಲ್ಲಿ ಏಪ್ರಿಲ್ 20ರಂದು ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಂಡಿದೆ. ಅಂದು ಸಂಜೆ 4 ಗಂಟೆಗೆ ಕೋಟೆ ರಸ್ತೆ ವಾಸವಿ ವಿದ್ಯಾಲಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಅಶ್ವತ್ಥ ಕುಮಾರಿ ನಂಜುಂಡರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಂಟ್ರಿ ಕ್ಲಬ್ ಅಧ್ಯಕ್ಷ ಡಿ.ಎಸ್.ಅರುಣ ಸಮಾರಂಭ ಉದ್ಘಾಟಿಸುವರು.
ಅಖಿಲ ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾ ಅಧ್ಯಕ್ಷೆ ಸುಶೀಲಾ ಬಾಲಕೃಷ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಎಸ್.ವಿ.ದೀಪಕ್, ವಾಸವಿ ವಿದ್ಯಾಲಯದ ಅಧ್ಯಕ್ಷ ಭೂಪಾಳಂ ಎನ್.ಸತ್ಯನಾರಾಯಣ, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಅಧ್ಯಕ್ಷೆ ಜ್ಯೋತಿ ನಾಗೇಶ್, ಆವೋಪ ಅಧ್ಯಕ್ಷ ಸತ್ಯನಾರಾಯಣ, ವಾಸವಿ ಯುವಜನ ಸಂಘದ ಅಧ್ಯಕ್ಷ ಕಾಂತೇಶ್ ಉಪಸ್ಥಿತರಿರುವರು.
ಸಂಜೆ 5.30ಕ್ಕೆ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವನ್ನು ಸುಶೀಲ ಬಾಲಕೃಷ್ಣ ಉದ್ಘಾಟಿಸುವರು. ಕಾರ್ಯಕ್ರಮದ ನಂತರ ತುಳಸಿ ಅರ್ಚನೆ, ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ. ಸಂಜೆ 6.30ಕ್ಕೆ ತಿರುಪತಿ ತಿರುಮಲ ದೇವಸ್ಥಾನದ ನಿವೃತ್ತ ವಿಶೇಷಾಧಿಕಾರಿ ಅಪ್ಪಣ್ಣಾಚಾರ್ಯ ಶ್ರೀನಿವಾಸ ಕಲ್ಯಾಣ ನಡೆಸಿಕೊಡುವರು.
ವಾಸವಿ ಮಹಿಳಾ ಸಂಘ, ಸಂಜೀವನಿ ಭಜನಾ ಮಂಡಳಿ, ಆರ್ಯವೈಶ್ಯ ಮಹಾಜನ ಸಮಿತಿ, ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘ, ವಾಸವಿ ಯುವಜನ ಸಂಘ, ಆರ್ಯವೈಶ್ಯ ವೃತ್ತಿ ನಿರತ ಅಧಿಕಾರಿಗಳ ಸಂಘ ಕಾರ್ಯಕ್ರಮಕ್ಕೆ ಸಹಕಾರ ನೀಡಿವೆ.