ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೋಟೆ ಸಿಪಿಐ ವಿರುದ್ಧ ಬಿಜೆಪಿ ಕಿಡಿ

Mainashree
Updated On : 20 Apr 2014, 11:41 am

ಚುನಾವಣೆಯಲ್ಲಿ ಶಾಂತಿಯುತವಾಗಿ ನಡೆಯಬೇಕೆಂದು ನಮ್ಮ ಪಕ್ಷದವರು ಸಾಕಷ್ಟು ಸಹಕಾರ ನೀಡಿದ್ದೆವು. ಆದರೂ ಕೆಲವು ಕಡೆ ಚುನಾವಣಾ ಸಿಬ್ಬಂದಿ, ಪೊಲೀಸರು ತಾರತಮ್ಯದಿಂದ ವರ್ತಿಸಿದರು ಎಂದು ಆಯನೂರು ಮಂಜುನಾಥ್ ಆರೋಪಿಸಿದರು. ಕೋಟೆ ಸಿಪಿಐ ಜಯರಾಜ್ ಮತಗಟ್ಟೆಯ ನಿಗದಿತ ಪ್ರದೇಶದ ಹೊರಭಾಗದಲ್ಲಿ ಪಕ್ಷದ ಶಾಲು ಮತ್ತು ಟೋಪಿ ಹಾಕಿಕೊಂಡವರನ್ನು ಜೀಪಿಗೆ ಎತ್ತಿ ಹಾಕಿಕೊಳ್ಳುವುದಾಗಿ ಗದರಿದ್ದಾರೆ. ಅವರು ಮೊದಲು ಚುನಾವಣಾ ನೀತಿ ನಿಯಮಗಳನ್ನು ಮೊದಲು ಓದಿಕೊಂಡು ಕರ್ತವ್ಯ ನಿರ್ವಹಿಸಲಿ ಎಂದು ಜೈರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತಮ್ಮ ಸಂವಿಧಾನದತ್ತ ಅಧಿಕಾರವನ್ನು ಅವರು ಚಲಾಯಿಸಲಿ. ಅವರಷ್ಟೇ ಕಾನೂನು ನಮಗೂ ಗೊತ್ತಿದೆ. ನಾವು ಕಾನೂನಿನ ಪ್ರಕಾರ ಹೋದರೆ ಅವರಿಗೆ ಕಷ್ಟವಾಗಬಹುದೆಂದು ಕಟುಕಿದರು. ಅವರು ಕಾನೂನು ತಿಳಿದುಕೊಳ್ಳಲಿ, ಇಲ್ಲವಾದರೆ ಆ ಸ್ಥಾನದಲ್ಲಿರುವುದು ವ್ಯರ್ಥ. ಅನೇಕ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ, ಒರಟಾಗಿ ನಡೆದುಕೊಂಡಿದ್ದಾರೆ, ಕಿರಿಕಿರಿ ಮಾಡುವ ಪ್ರಯತ್ನ ಮಾಡಿದ್ದಾರೆಂದು ಟೀಕಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement