ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಟ್ಟಣಶೆಟ್ಟಿಗೆ ಬೇಂದ್ರೆ ಪ್ರಶಸ್ತಿ ಪ್ರದಾನ

Mainashree
Updated On : 20 Apr 2014, 11:42 am

ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘ ನೀಡುವ ದ.ರಾ. ಬೇಂದ್ರೆ ಪ್ರಶಸ್ತಿಯನ್ನು ಶನಿವಾರ ನಡೆದ ಸಮಾರಂಭದಲ್ಲಿ ಕವಿ ಸಿದ್ದಲಿಂಗ ಪಟ್ಟಣ ಶೆಟ್ಟಿ ಸ್ವೀಕರಿಸಿದರು.
ಕರ್ನಾಟಕ ಸಂಘ ಭವನದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಟ್ಟಣ ಶೆಟ್ಟಿಯವರು, ಬೇಂದ್ರೆ ಧಾರವಾಡದವರೇ ಆದರೂ ಅವರ ಕಷ್ಟಕಾಲದಲ್ಲಿ ಸ್ಥಳೀಯರು ಕೈಹಿಡಿಯಲಿಲ್ಲ. ಅವರನ್ನು ಪ್ರೀತಿಯಿಂದ ಕಂಡು, ಸಲಹಿದ್ದು ಶಿವಮೊಗ್ಗ ಎಂದು ತಿಳಿಸಿದರು.
ಶಿವಮೊಗ್ಗದ ನಂಟು: ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಸಂಕಟ ಎದುರಿಸಿದ್ದರಿಂದ ಬೇಂದ್ರೆಯವರಿಗೆ ಹಠ, ಛಲವಿತ್ತು. ಕುವೆಂಪು ನಡೆದಾಡಿದ ಶಿವಮೊಗ್ಗದ ನೆಲದಲ್ಲಿ ಬೇಂದ್ರೆ ಒಡನಾಡಿದವರು. ಅವರಿಗೆ ಧಾರವಾಡಕ್ಕಿಂತ ಶಿವಮೊಗ್ಗದ ನಂಟು ಸಾಕಷ್ಟಿತ್ತು ಎಂದು ಸ್ಮರಿಸಿದರು.
ಧಾರವಾಡದ ಸಾಧನಕೇರಿ ಮನೆಯಲ್ಲಿ ಇಂದು ದ.ರಾ.ಬೇಂದ್ರೆಯವರ ಒಂದೇ ಒಂದು ಕುರುಹು ಇಲ್ಲ ಎಂದು ವಿಷಾದಿಸಿದರು. ಸಾಧನಕೇರಿಯ ಮನೆಯ ಕೋಣೆಯಲ್ಲಿ ಬೇಂದ್ರೆಯವರು ಹಿಡಿದ ಪೆನ್ನು, ಓದಿದ ಪುಸ್ತಕ, ಮಲಗಿದ ಹಾಸಿಗೆ ಯಾವುದೂ ಇಲ್ಲ. ಅಲ್ಲಿ ಅವರ ಹೆಸರಿನ ಪ್ರತಿಷ್ಠಾನವಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್, ಗೌರವ ಕಾರ್ಯದರ್ಶಿ ನಾಗಭೂಷಣ್, ಹೇಮಾ ಪಟ್ಟಣಶೆಟ್ಟಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement