ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಳೆಗುಂದುತಿದೆ ಕುಂದಾದ್ರಿ ಸೌಂದರ್ಯ

Mainashree
Updated On : 21 Apr 2014, 10:57 am

ಕ.ಪ್ರ.ವಾರ್ತೆ  ಸೊರಬ   ಏ.20
ತೀರ್ಥಹಳ್ಳಿಯಿಂದ ಸುಮಾರು 40 ಕಿಮೀ ದೂರದ ಕುಂದಾದ್ರಿ ಸಾವಿರ ವರ್ಷಗಳ ಹಿಂದೆ ಪ್ರಸಿದ್ಧ ಜಿನಕ್ಷೇತ್ರ. ಕುಂದಾದ್ರಿ ಬೆಟ್ಟದ ತುದಿಯಲ್ಲಿ ಪ್ರಾಚೀನ ಬಸದಿ ಕಂಗೊಳಿಸುವಂತಿದೆ.
ಮೊದಮೊದಲು ಗುಡ್ಡವೇರಲು ಹರಸಾಹಸ ಪಡಬೇಕಿದ್ದ ಸಮಯದಲ್ಲಿ, ಹೆಚ್ಚಿನ ಅವನತಿಯೇನೂ ಕಂಡಿರಲಿಲ್ಲ. ಆದರೆ, ಪ್ರವಾಸೋದ್ಯಮದ ದೃಷ್ಟಿಯಿಂದ ಈಚೆಗೆ ಈ ಗುಡ್ಡವೇರಲು ಸುಸಜ್ಜಿತ ರಸ್ತೆ ನಿರ್ಮಾಣವಾದ ಬಳಿಕ ವಾಹನಗಳು ಸಲೀಸಾಗಿ ಬಸದಿಯ ತನಕ ಏರುತ್ತಿವೆ. ಜಿನಭಕ್ತರು, ಪ್ರವಾಸ ಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ.
ಆದರೆ, ಮೋಜು, ಮಸ್ತಿಗೆಂದು ಬರುವ ಪಡ್ಡೆಗಳ ಸಂಖ್ಯೆಯೂ ಅಧಿಕವಾದೆ. ಪರಿಣಾಮ ಇಲ್ಲಿನ ಸುಂದರ ಪರಿಸರದಲ್ಲೀಗ ಎಲ್ಲಿ ಕಾಲಿಟ್ಟರೆ ಗಾಜು ಚುಚ್ಚೀತೋ ಎಂಬ ಆತಂಕ ಎದುರವಾಗುವಂತಾಗಿದೆ. ಮಿತಿಯಿಲ್ಲದ ಪ್ಲಾಸ್ಟಿಕ್, ಗಾಜು ಇತ್ಯಾದಿಗಳ ರಾಶಿಯೇ ಅಲ್ಲಿ ಸೃಷ್ಟಿಸಲಾಗಿದೆ. ಇಲ್ಲಿಗೆ ಪ್ರವಾಸಕ್ಕೆಂದು ಬರುವವರು ಪರಿಸರ ಪ್ರಜ್ಞೆ ಮರೆತು ವರ್ತಿಸುತ್ತಿರುವುದು ದುರಂತ.
ಮದ್ಯ ವ್ಯಸನಿಗಳು, ಕಿಡಿಗೇಡಿಗಳು ಇಲ್ಲಿನ ವಸತಿ ಗೃಹ, ಬಸದಿಯ ಗೋಡೆಗಳಲ್ಲಿ ವಿಕೃತ ಸಾಹಿತ್ಯ ಸೃಷ್ಟಿಸಿದ್ದಾರೆ. ಸಾಲದೆಂಬಂತೆ ಇಲ್ಲಿರುವ ವಿಶೇಷ ಔಷಧೀಯ ಸಸ್ಯಗಳಿಗೂ ಧಕ್ಕೆ ತರುತ್ತಿದ್ದಾರೆ. ಕಾಡು ಗಿಡ, ಮರಗಳು ಕೊಡಲಿ ಏಟಿಗೆ ಧರೆಗುರುಳುತ್ತಿವೆ.
ಇನ್ನಾದರೂ, ಅರಣ್ಯ ಇಲಾಖೆ ಹಾಗೂ ಪ್ರಾಚ್ಯ ಇಲಾಖೆ ಈ ಪ್ರಾಚೀನ ಬಸದಿ ರಕ್ಷಣೆ ಹಾಗೂ ಪರಿಸರ ನೈರ್ಮಲ್ಯ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಪ್ರವಾಸಿಗರು ಪ್ರಜ್ಞೆ ಮೆರೆಯಬೇಕಿದೆ.

 ಶ್ರೀಪಾದ ಬಿಚ್ಚುಗತ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement