ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪೇದೆ ಪತ್ನಿ ಅನುಮಾನಸ್ಪದ ಸಾವು

Mainashree
Updated On : 21 Apr 2014, 10:57 am

ಶಿವಮೊಗ್ಗ:  ಇಲ್ಲಿನ ಮಾಚೇನಹಳ್ಳಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ವಸತಿ ಸಂಕೀರ್ಣದಲ್ಲಿ ಮಹಿಳೆಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.
ಕೆಎಸ್‌ಆರ್‌ಪಿ ಪೇದೆ ಸಿದ್ದೋಜಿರಾವ್ ಸಿಂಧೆ ಎಂಬುವರ ಪತ್ನಿ ದೇವಮ್ಮ (36) ಸಾವಿಗೆ ಶರಣಾದವರು. ಶನಿವಾರ ರಾತ್ರಿ ವಿಷ ಕುಡಿದ ಸ್ಥಿತಿಯಲ್ಲಿದ್ದ ಇವರನ್ನು ಭದ್ರಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಭಾನುವಾರ ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಗನಿಂದಲೇ ಅಪ್ಪನಿಗೆ ಥಳಿತ:  ಈ ಮಧ್ಯೆ ತನ್ನ ತಾಯಿಯ ಸಾವಿಗೆ ಅಪ್ಪನೇ ಕಾರಣ ಎಂದು ಆರೋಪಿಸಿದ ಮೃತ ದೇವಮ್ಮ ಪುತ್ರ ಅರುಣ್, ಮೆಗ್ಗಾನ್ ಆಸ್ಪತ್ರೆ ಆವರಣದ ಶವಾಗಾರದ ಎದುರೇ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲಿ ಸೇರಿದ್ದ ಕುಟುಂಬ ವರ್ಗದವರು ಆತನನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಪ್ರಯೋಜವಾಗಲಿಲ್ಲ ಎನ್ನಲಾಗಿದೆ. ತನ್ನ ತಾಯಿಗೆ ತಂದೆಯೇ ವಿಷ ಕುಡಿಸಿದ್ದಾರೆ. ಹೀಗಾಗಿಯೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಅರುಣ್ ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement