ಜಿಎಂಐಟಿ ಎಲೆಕ್ಟ್ರೋಫೋರಿಯಾ ಕಾರ್ಯಾಗಾರ
ಕ.ಪ್ರ.ವಾರ್ತೆ ದಾವಣಗೆರೆ ಏ. 21
ನಗರದ ಜಿಎಂಐಟಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಿಂದ ಎಲೆಕ್ಟ್ರೋಫೋರಿಯಾ ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಲಾಗಿತ್ತು.
ಕಾಲೇಜು ಪ್ರಾಚಾರ್ಯ ಡಾ. ಎಸ್.ಜಿ. ಹಿರೇಮಠ್ ಕಾರ್ಯಾಗಾರ ಉದ್ಘಾಟಿಸಿ, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ಕಾರ್ಯಾಗಾರ ಸಹಕಾರಿ ಎಂದು ತಿಳಿಸಿದರು.
ವಿಭಾಗ ಮುಖ್ಯಸ್ಥ ಪ್ರೊ. ಡಿ. ಬಸವಲಿಂಗಪ್ಪ, ಕಾರ್ಯಾಗಾರದ ಸಂಯೋಜಕರಾದ ಎಸ್.ಎಚ್. ಲತಾ, ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಸಂಪನ್ಮೂಲ ವ್ಯಕ್ತಿ ದಿನೇಶಕುಮಾರ, ಬ್ರೈನ್ ವೈರ್ ತಂಡದ ಸದಸ್ಯರು ಕಾಲೇಜಿನ ಇ ಆ್ಯಂಡ್ ಸಿ ವಿಭಾಗದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಅನೇಕ ರೀತಿಯ ಹಾರ್ಡ್‌ವೇರ್ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.