ತಲೆ ಮರೆಸಿಕೊಂಡಿದ್ದ ಪಂಡ್ರಿ ವಿಜಯ್, ಶಶಿ ಬಂಧನ
ದಾವಣಗೆರೆ: ದಾವಣಗೆರೆ ಹಳೆ ಪಿ.ಬಿ. ರಸ್ತೆಯ ಗ್ಯಾಸ್ ಬಂಕ್ ಬಳಿ ಆಟೋ ಚಾಲಕ, ರೌಡಿ ಶೀಟರ್ ಜಲೀಲ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಸಿಪಿಐ ಚಂದ್ರಹಾಸ ಲಕ್ಷ್ಮಣನಾಯ್ಕ ನೇತೃತ್ವದ ಪೊಲೀಸರ ವಿಶೇಷ ಪತ್ತೆ ದಳವು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ನಗರದ ಬಿಎಸ್ಸೆನ್ನೆಲ್ ಕಚೇರಿ ಬಳಿ ಗ್ಯಾಸ್ ಬಂಕ್ನಲ್ಲಿ ಆಟೋ ರಿಕ್ಷಾಗೆ ಗ್ಯಾಸ್ ತುಂಬಿಸಲು ಹೋಗಿದ್ದ ಜಲೀಲ್ನ ಮೇಲೆ ಆರೋಪಿಗಳಾದ ಪಂಡ್ರಿ ವಿಜಯ ಹಾಗೂ ಶಶಿ ಆಟೋರಿಕ್ಷಾ ಲೈನ್ಗೆ ನಿಲ್ಲಿಸುವ ವಿಚಾರದ ಹಳೆ ದ್ವೇಷದಿಂದ ಕಟ್ಟಿಗೆಯಿಂದ ಹಲ್ಲೆ ಮಾಡಿ, ಕುತ್ತಿಗೆಯನ್ನು ಕೊಯ್ದು ಹತ್ಯೆ ಮಾಡಿದ್ದಾರೆ ಎಂದು ನಿಟುವಳ್ಳಿಯ ಆಟೋ ಚಾಲಕ ಇಸ್ಮಾಯಿಲ್ ವಿದ್ಯಾ ನಗರ ಪೊಲೀಸ್ ಠಾಣೆಗೆ ನೀಡಿದ್ದ ದೂರನ್ನು ಆದರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಾದ ಪಂಡ್ರಿ ವಿಜಯ ಹಾಗೂ ಶಶಿಯನ್ನು ಬಂಧಿಸಲು ಸಿಪಿಐ ಚಂದ್ರಹಾಸ ಲಕ್ಷ್ಮಣನಾಯ್ಕ ನೇತೃತ್ವದಲ್ಲಿ ವಿಶೇಷ ಪತ್ತೆ ದಳದ ತಂಡವು ಆರೋರಪಿಗಳಾದ ಪಂಡ್ರಿ ವಿಜಯ್ ಹಾಗೂ ಶಶಿ ಎಂಬ ಇಬ್ಬರನ್ನೂ ಸೋಮವಾರ ಬಂಧಿಸಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ್ದ ಚಾಕು ಹಾಗೂ ಕಟ್ಟಿಗೆ ಪೋಲ್ಸನ್ನು ಜಪ್ತು ಮಾಡಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಇಬ್ಬರೂ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆಟೋ ಚಾಲಕ ಜಲೀಲ್ನ ಕೊಲೆ ಆರೋಪಿಗಳಾದ ಪಂಡ್ರಿ ವಿಜಯ ಹಾಗೂ ಶಶಿಯನ್ನು ಬಂಧಿಸಿದ ವಿಶೇಷ ಪತ್ತೆ ದಳದ ನೇತೃತ್ವ ವಹಿಸಿದ್ದ ಸಿಪಿಐ ಚಂದ್ರಹಾಸ ಲಕ್ಷ್ಮಣನಾಯ್ಕ,
ಬಡಾವಣೆ ಠಾಣೆ ಪ್ರಭಾರ ಎಸ್ಐ ಟಿ.ವಿ. ದೇವರಾಜ, ಸಿಬ್ಬಂದಿ ಅಂಜಿನಪ್ಪ, ಗಿರೀಶ್ ಕಾರ್ಯ ವೈಖರಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ. ಪ್ರಕಾಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.