ಬತ್ತ ರೋಗ ಪತ್ತೆಗೆ ಸಾಫ್ಟ್ವೇರ್ ಅಭಿವೃದ್ಧಿ
ಕ.ಪ್ರ.ವಾರ್ತೆ ದಾವಣಗೆರೆ ಏ. 21
ಬತ್ತದ ಪೈರಿನ ಆರೋಗ್ಯ, ರೋಗ ಲಕ್ಷಣ ಪತ್ತೆ ಹಚ್ಚಲು ದಾವಣಗೆರೆ ಬಿಐಇಟಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ ಪ್ರಾಜೆಕ್ಟ್ ಇದೀಗ ಅಂತಾರಾಷ್ಟ್ರೀಯ ಮೈಕ್ರೋಸಾಫ್ಟ್ ಯೂತ್ ಸ್ಪಾರ್ಕ್ ಚಾಲೆಂಜ್ನ ಚೇಂಜ್ ಸ್ಪರ್ಧೆಯ ಅಂತಿಮ 20 ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜಿನ ಐಎಸ್ ಮತ್ತು ಇ ವಿಭಾಗ ಮುಖ್ಯಸ್ಥೆ ಡಾ. ಬಿ. ಪೂರ್ಣಿಮಾ, ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ, ಬಿಹಾರ ಮೂಲದ ಕುಮಾರ್ ವಿವೇಕ್ ತನ್ನ ಸಾಧನೆಯ ಮೂಲಕ ಇಂದು ಗಮನ ಸೆಳೆಯುತ್ತಿದ್ದಾನೆ ಎಂದರು.
ಭಾರತದಿಂದ ದಾವಣಗೆರೆ ಬಿಐಇಟಿ ಕಾಲೇಜಿನ ಕುಮಾರ ವಿವೇಕ್ ಹಾಗೂ ಚೆನ್ನೈನ ಸತ್ಯನಾರಾಯಣ ಮಾತ್ರ ಮೈಕ್ರೋಸಾಫ್ಟ್ ಕಂಪನಿ ಹಮ್ಮಿಕೊಂಡ ಸ್ಪರ್ಧೆಯಲ್ಲಿ ಅಂತಿಮ 20 ವಿದ್ಯಾರ್ಥಿಗಳ ಪಟ್ಟಿಯಲ್ಲಿರುವ ಭಾರತದ ವಿದ್ಯಾರ್ಥಿಗಳಾಗಿದ್ದಾರೆ. ವಿಶ್ವದ 14 ಲಕ್ಷ ಸ್ಪರ್ಧಿ ವಿದ್ಯಾರ್ಥಿಗಳಲ್ಲಿ ಅಂತಿಮವಾಗಿ ಆಯ್ಕೆಯಾದ ಭಾರತದ ಇಬ್ಬರು ವಿದ್ಯಾರ್ಥಿಗಳ ಪೈಕಿ ತಮ್ಮ ಕಾಲೇಜಿನ ಒಬ್ಬ ವಿದ್ಯಾರ್ಥಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಕ್ರಿಯಾಶೀಲ ವಿದ್ಯಾರ್ಥಿ ಕುಮಾರ ವಿವೇಕ್ಗೆ ವೋಟು ಮಾಡಲು ಏ.22 ಅಂತಿಮ ದಿನ. ವೆಬ್ಸೈಟ್
ಡಿಡಿಠಡ ಣ್ಟ್ಡಝಿಡಠಝ್ಠ್ಞ್ಛಛಟಟಜಟ್ಜಿಜ.್ಛ್ಟಟಢ್ಟಡಿಜಜಟಿಡ್ಠಿಣ.್ಛಜಿಟ್ಝಜ
298ಗೆ ಭೇಟಿ ನೀಡಿ, ವೋಟು ಮಾಡ ಬಹುದು. ಮೈಕ್ರೋಸಾಫ್ಟ್ ವಿದ್ಯಾರ್ಥಿಗಳ ಗುಂಪಿನಲ್ಲಿ ಒಬ್ಬರಾದ ಕುಮಾರ ವಿವೇಕ್ ಮೂಲತಃ ಬಿಹಾರ್ ರಾಜ್ಯದವರು. ಇಲ್ಲಿನ ಬಿಐಇಟಿ ಕಾಲೇಜಿನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ 8ನೇ ಸೆಮಿಸ್ಟರ್ನಲ್ಲಿ ಆತ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ವಿಂಡೋಸ್ ಫೋನ್ ಅಪ್ಲಿಕೇಷನ್ ಬಳಸಿಕೊಂಡು, ಬತ್ತದ ಪೈರಿನ ಆರೋಗ್ಯ ಮತ್ತು ರೋಗ ಲಕ್ಷಣ ಪತ್ತೆ ಮಾಡುವ ನಿಟ್ಟಿನಲ್ಲಿ ಕುಮಾರ ವಿವೇಕ್ ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ ಪ್ರಾಜೆಕ್ಟ್ ಈಗ ಅಂತಿಮ 20 ಪ್ರಾಜೆಕ್ಟ್ಗಳಲ್ಲಿ ಒಂದಾಗಿದೆ.
2015ಕ್ಕೆ 300 ಮಿಲಿಯನ್ ಯುವಕರಿಗೆ ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮೈಕ್ರೋಸಾಫ್ಟ್ ಯೂತ್ ಸ್ಪಾರ್ಕ್ ಚಾಲೆಂಜ್ನ ಉದ್ದೇಶವಾಗಿದೆ ಎಂದು ವಿವರಿಸಿದರು.
ಉತ್ತಮ ಪ್ರತಿಕ್ರಿಯೆ: ಕಾಲೇಜು ವಿದ್ಯಾರ್ಥಿ ಕುಮಾರ್ ವಿವೇಕ್ ಮಾತನಾಡಿ, ವಿಂಡೋಸ್ ಫೋನ್ ಅಪ್ಲಿಕೇಷನ್ ಬಳಸಿಕೊಂಡು, ಬತ್ತದ ಪೈರಿನ ಆರೋಗ್ಯ ಮತ್ತು ರೋಗ ಲಕ್ಷಣ ಪತ್ತೆ ಮಾಡುವ ನಿಟ್ಟಿನಲ್ಲಿ ತಾವು ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ ಪ್ರಾಜೆಕ್ಟ್ ಬಗ್ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೈಕ್ರೋಸಾಫ್ಟ್ ವಿದ್ಯಾರ್ಥಿಗಳ ಗುಂಪಿನ ತಾವು ಹೊಸ ತಾಂತ್ರಿಕ ಪ್ರಯೋಗ, ಕಂಪನಿ ಪರಿಣಿತರ ಜತೆಗೆ ಜಾಗತಿಕ ಜಾಲಬಂಧ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕಾಗುತ್ತದೆ ಎಂದರು.
ಬತ್ತ ಭಾರತದ ಪ್ರಮುಖ ಬೆಳೆಯಾಗಿದ್ದು, ದಕ್ಷಿಣ, ಉತ್ತರದಲ್ಲಿ 2011- 12ರಲ್ಲಿ ಅಕ್ಕಿ ಉತ್ಪಾದನೆ 104.32 ಮಿಲಿಯ ನ್ ಟನ್ನಷ್ಟಿದೆ. ಆದರೆ, ಸಾರಜನಕಯುಕ್ತ ಬೆಳೆ ಇಳುವರಿ ನಿರ್ಧರಿಸುತ್ತದೆ.
ಸರಿಯಾದ ಪ್ರಮಾಣದ ಬಳಕೆ ಆಧಾರದಲ್ಲಿ ಇಳುವರಿ ಹೆಚ್ಚಿಸಬಹುದು. ಹಾಗಾಗಿ ಹೆಚ್ಚು ಇಳುವರಿಗಾಗಿ ತಮ್ಮ ಅಪ್ಲಿಕೇಷನ್ ಸಹಕಾರಿಯಾಗಲಿದೆ.
ಒಟ್ಟಾರೆ ತಮ್ಮ ಅಪ್ಲಿಕೇಷನ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಾಲೇಜಿನ ವಿಭಾಗ ಮುಖ್ಯಸ್ಥರು, ಬೋಧಕರ ಮಾರ್ಗದರ್ಶನದಲ್ಲಿ ಸಾಧನೆ ಸಾಧ್ಯವಾಗಿದೆ ಎಂದರು.