ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಪರಿಚಿತ ಶವ ಪತ್ತೆ

Rashmi Kasaragodu
Updated On : 23 Apr 2014, 11:37 am

ಶಿವಮೊಗ್ಗ:  ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ಹಿಂಭಾಗದ ಹೊಳೆಯ ನೀರಿನಲ್ಲಿ ಕಾಲು ಜಾರಿ ಅಥವಾ ಇನ್ಯಾವುದೋ ಕಾರಣದಿಂದ ಏ.21ರಂದು ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟಿದ್ದಾರೆ. ಇವರ ವಿಳಾಸ ಮತ್ತು ವಾರಸುದಾರರು ಯಾರು ಇರುವುದಿಲ್ಲ. ಶವವು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
   ಅಪರಿಚಿತ ಗಂಡಸು, ಸುಮಾರು 45-50 ವರ್ಷ, ದುಂಡನೆಯ ಮುಖ, ಎಣ್ಣೆಗೆಂಪು ಬಣ್ಣ, ತಲೆಯಲ್ಲಿ ಕಪ್ಪು ಕೂದಲು, ದೃಢಕಾಯ ಮೈಕಟ್ಟು, ವ್ಯಕ್ತಿಯ ಕೊರಳಲ್ಲಿ ಮರದ ಮಣಿ ಸರ ಇರುತ್ತದೆ. ಕೈಯಲ್ಲಿನ ಲೋಹದ ಉಂಗುರವಿದ್ದು, ಕಪ್ಪು ಗೆರೆಯುಳ್ಳ ಬಿಳಿಬಣ್ಣದ ಚೌಕಳಿ ಶರ್ಟ್, ಬಿಳಿ ಬನಿಯನ್ ಇರುತ್ತದೆ. ಈ ಮೃತವ್ಯಕ್ತಿಯ ವಾರಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್  ಸಂಪರ್ಕಿಸುವಂತೆ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement