ದೇಶದ್ರೋಹಿ ಸಂಘಟನೆ ನಿಷೇಧಕ್ಕೆ ಆಗ್ರಹ
ಶಿವಮೊಗ್ಗ: ರಾಜ್ಯದ ಯಾದಗಿರಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ನಡೆದಿದ್ದು ದೇಶದ್ರೋಹಿ ಕೃತ್ಯ ಎಂದು ನಗರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ ಹೇಳಿದ್ದು, ರಾಜ್ಯ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ದೇಶದ ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಜಾಗೃತಿ ಮಾಡುವುದರ ಬದಲಾಗಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿಸಿ ದೇಶದ್ರೋಹದ ಕೆಲಸ ಮಾಡಿಸುತ್ತಿರುವುದು ಅತ್ಯಂತ ಘೋರ ಅಪರಾಧ. ಈ ಕಾರ್ಯ ಮಾಡುತ್ತಿರುವ ದೇಶದ್ರೋಹಿ ಸಂಘಟನೆ ನಿಷೇಧಿಸಬೇಕೆಂದು ಈ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದೇಶದ್ರೋಹದ ಚಿಂತನೆ ತರುತ್ತಿರುವುದಕ್ಕೆ ಸರ್ಕಾರ ಮೂಕಪ್ರೇಕ್ಷಕರಂತೆ ಇದು ನನ್ನ ಕೆಲಸವಲ್ಲ, ಇದು ರಕ್ಷಣಾ ಇಲಾಖೆಗೆ ಬರುವುದಿಲ್ಲ, ಮಾನವ ಹಕ್ಕು ಆಯೋಗಕ್ಕೆ ಬರಬಹುದು ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವ ರಕ್ಷಣಾ ಸಚಿವರು ಕ್ಷಮೆ ಕೇಳಬೇಕು ಎಂದು ಅವರು ಹೇಳಿದ್ದಾರೆ.