ಮಲೆಶಂಕರದಲ್ಲಿ ರಥೋತ್ಸವ
ಆಯನೂರು: ಧಾರ್ಮಿಕ ಕ್ಷೇತ್ರ ಮಲೆಶಂಕರದಲ್ಲಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ರಥೋತ್ಸವ ಜರುಗಿತು.
ಕೂಡ್ಲಿ ಮಠದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಹಾರ್ನಹಳ್ಳಿ ಚೌಕಿ ಮಠದ ಸ್ವಾಮೀಜಿಯವರು ವಿಧ್ಯುಕ್ತವಾಗಿ ರಥೋತ್ಸವಕ್ಕೆ ಚಾಲನೆ ನೀಡಿದರು. ಆಯನೂರು ಸೇರಿದಂತೆ ಸುತ್ತಮುತ್ತಲಿನ ಸಿರಿಗೆರೆ, ತಮ್ಮಡಿಹಳ್ಳಿ, ಪುರದಾಳು, ಕುಂಸಿ, ಹಾರ್ನಹಳ್ಳಿ ಸೇರಿದಂತೆ ಹಲವೆಡೆಯಿಂದ ಜನತೆ ಎತ್ತಿನಗಾಡಿಗಳಲ್ಲಿ ಕುಟುಂಬ ಸಮೇತ ಆಗಮಿಸಿ ಪಾಲ್ಗೊಂಡಿದ್ದರು.
ಸಮೀಪದ ತೋಟದ ಮಾಲೀಕರು ಜನರಿಗೆ ಲಘು ಉಪಹಾರ, ಪಾನಕ, ಕೋಸಂಬರಿ ವ್ಯವಸ್ಥೆ ಮಾಡಿದ್ದರು.