ಕ್ರಿಯಾಕರ್ಮ ನೆರವೇರಿಸಿದ ಕುಮಾರ್ ಬಂಗಾರಪ್ಪ
ಸೊರಬ: ಪಟ್ಟಣದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಧರ್ಮಪತ್ನಿ ಶಕುಂತಲಮ್ಮ ಅವರ ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲಿ ಪ್ರತ್ಯೇಕವಾಗಿ 3ನೇ ದಿನದ ಕಾರ್ಯಗಳನ್ನು ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಪತ್ನಿ, ಮಕ್ಕಳೊಂದಿಗೆ ಆಗಮಿಸಿ, ನೆರವೇರಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಮಾಜ ಹಾಗೂ ಕುಟುಂಬದ ಹಿರಿಯರು ಸೂಚಿಸಿದಂತೆ ತಾಯಿಯವರ ಅಂತ್ಯಸಂಸ್ಕಾರ ನಂತರದ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತೇನೆ. ಹಿಂದೂ ಸಂಪ್ರದಾಯದಂತೆ ಎಲ್ಲಾ ಕ್ರಿಯೆಗಳನ್ನು ನಿರ್ವಹಿಸಲಾಗಿದೆ. ಕುಟುಂಬದ ಹಿರಿಯ ಮಗನಾಗಿ ನನ್ನ ಕರ್ತವ್ಯ ನಿಭಾಯಿಸುತ್ತೇನೆ ಎಂದರು.
ಪೂಜಾ ಕಾರ್ಯದಲ್ಲಿ ಪತ್ನಿ ವಿದ್ಯುಲ್ಲತಾ, ಪುತ್ರ ಅರ್ಜುನ್, ಪುತ್ರಿ ಲಾವಣ್ಯ, ಪಿ.ಎಸ್. ಪ್ರಶಾಂತ್, ಚಿದಾನಂದ್, ಸಂಬಂಧಿಗಳು ಹಾಗೂ ನೂರಾರು ಅಭಿಮಾನಿಗಳು ಹಾಜರಿದ್ದರು.