ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸೂಡಾ ಯೋಜನಾಧಿಕಾರಿ ಮನೆ ರೈಡ್

Rashmi Kasaragodu
Updated On : 26 Apr 2014, 11:12 am

ಆದಾಯಕ್ಕಿಂತ ಶೇ.259 ಹೆಚ್ಚು ಆಸ್ತಿ ಪತ್ತೆ ಹಚ್ಚಿದ ಲೋಕಾಯುಕ್ತ ಅಧಿಕಾರಿಗಳು


ಶಿವಮೊಗ್ಗ:  ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಟೌನ್ ಪ್ಲಾನಿಂಗ್ ವಿಭಾಗದ ನಗರ ಯೋಜಕ ಆರ್. ನಾಗರಾಜ್ ಅವರ ಮನೆ ಮೇಲೆ ಶುಕ್ರವಾರ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದರು.
ನಗರದ ಗೋಪಾಳಗೌಡ ಬಡಾವಣೆಯ 100 ಅಡಿ ರಸ್ತೆಯಲ್ಲಿರುವ ಈ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ನಾಗರಾಜ್ ನೇತೃತ್ವದ ತಂಡವು ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ನಗರ ಯೋಜಕ ಆರ್. ನಾಗರಾಜ್ ಅವರು ಮನೆಯಲ್ಲಿರಲಿಲ್ಲ. ಈ ಸಂದರ್ಭದಲ್ಲಿ ಆದಾಯಕ್ಕಿಂತ ಶೇ.258.74ರಷ್ಟು ಹೆಚ್ಚು ಆಸ್ತಿ ಪತ್ತೆಯಾಗಿದೆ.
ಯೋಜನಾ ಸಹಾಯಕರಾಗಿರುವ ಆರ್. ನಾಗರಾಜ್ ಅವರಲ್ಲಿ ಗೋಪಾಲಗೌಡ ಬಡಾವಣೆಯಲ್ಲಿ ಎರಡು ನಿವೇಶನ, ವಾಜಪೇಯಿ ಬಡಾವಣೆಯಲ್ಲಿ ಒಂದು ನಿವೇಶನ, ಗೋಪಾಲಗೌಡ ಬಡಾವಣೆಯಲ್ಲಿ ಎರಡು ಅಂತಸ್ತಿನ ಒಂದು ಮನೆ ಇದೆ. 1 ಹೋಂಡಾ ಆಕ್ಟಿವಾ ಬೈಕ್, 1 ಮಾರುತಿ ಎಸ್ಟರ್ ಕಾರು, 1 ಯಮಹಾ ಬೈಕ್, 3,12,100 ಮೌಲ್ಯದ 220 ಗ್ರಾಂ ಬಂಗಾರ, 204 ಗ್ರಾಂ ಬೆಳ್ಳಿ, 33,420 ನಗದು ಪತ್ತೆಯಾಗಿದೆ. ಗೃಹೋಪಯೋಗಿ ವಸ್ತುಗಳ ಮೌಲ್ಯ 12,01,755 ಅಲ್ಲದೆ, ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಅನಿಲ್ ಇಂಡಸ್ಟ್ರೀನ್ 5 ಲಕ್ಷ ಬಂಡವಾಳ ತೊಡಗಿಸಿದ್ದಾರೆ. ಹಾಯ್‌ಹೊಳೆ ಗ್ರಾಮದಲ್ಲಿ 3 ಎಕರೆ ಬಗರ್‌ಹುಕುಂ ಸಾಗುವಳಿ ಭೂಮಿ, ಅಡಕೆ ತೋಟ, ಮನೆಗೆ 3 ಲಕ್ಷ ವೆಚ್ಚ ಮಾಡಿದ್ದಾರೆ.
1,650- 32,000 ವೇತನ ಶ್ರೇಣಿ ಹೊಂದಿರುವ ಆರ್. ನಾಗರಾಜ್ ಅವರು ಹೊಂದಿರುವ ಒಟ್ಟು ಆಸ್ತಿ ಮೌಲ್ಯ 64,79,275 ಇವರು ತಮ್ಮ ಸೇವಾವಧಿಯಲ್ಲಿ ಪಡೆದಿರುವ ಆದಾಯ 20,50,000 ಮಾಡಿರುವ ವೆಚ್ಚ 8,75,000 ಇದರಂತೆ ಒಟ್ಟ 53,04,275 ಹೆಚ್ಚುವರಿ ಆದಾಯ ಹೊಂದಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಬೆಳಗಿನಿಂದ ಸಂಜೆಯವರೆಗೂ ಅಧಿಕಾರಿಗಳು ಆರ್. ನಾಗರಾಜ್ ಅವರ ನಿವಾಸದಲ್ಲಿ ತಪಾಸಣೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement