ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಪೋಷಕಾಂಶದಿಂದ ಉತ್ತಮ ಇಳುವರಿ'

Rashmi Kasaragodu
Updated On : 27 Apr 2014, 1:53 am

ಹೊಸನಗರ:  ಸಸ್ಯಗಳ ಸಮತೋಲಿತ ಬೆಳವಣಿಗೆ, ಉತ್ತಮ ಇಳುವರಿಗೆ ನಿಯಮಿತವಾಗಿ ಪೋಷಕಾಂಶ ಪೂರೈಸುವುದು ಅಗತ್ಯ ಎಂದು ಪ್ರಗತಿಪರ ಕೃಷಿಕ ಜಗದೀಶ ರಾವ್ ಹೇಳಿದರು. ತಾಲೂಕಿನ ಕೋಡೂರಿನಲ್ಲಿ ಶನಿವಾರ ಗಾಯತ್ರಿ ಸ್ವಸಹಾಯ ಸಂಘದ ಆಶ್ರಯದಲ್ಲಿ ನಡೆದ ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಡಕೆ ಬೆಳೆಗಾರರು 3 ಅಥವಾ 2 ವರ್ಷಗಳಿಗೊಮ್ಮೆ ಗೊಬ್ಬರ ನೀಡುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಫಸಲಿನಲ್ಲಿ ಏರಿಳಿತಕ್ಕೆ ಇದು ಕಾರಣ. ಅಡಕೆಯಂತಹ ಬಹುವಾರ್ಷಿಕ ಬೆಳೆಗಳಿಗೆ ಕನಿಷ್ಠ ವರ್ಷಕ್ಕೆ 3 ಬಾರಿ ಗೊಬ್ಬರ ನೀಡಬೇಕು. ದ್ರವರೂಪದಲ್ಲಿ ಗೊಬ್ಬರ ನೀಡಿದರೆ ಒಳ್ಳೆಯದು. ಯಾವುದೇ ಬೆಳೆಯಿಂದ ಹೆಚ್ಚಿನ ಇಳುವರಿ ನಿರೀಕ್ಷೆ ಮಾಡಬೇಕಾದರೆ ಆ ಬೆಳೆ ನಮ್ಮಿಂದ ನಿರೀಕ್ಷೆ ಮಾಡುವ ಪೋಶಕಾಂಶ ನೀಡಬೇಕು. ಅಡಕೆ ತೋಟದಲ್ಲಿ ಅಂಡರ್‌ಗ್ರೌಂಡ್ ಬಸಿಗಾಲುವೆ ಮಾಡುವುದರಿಂದ ಸಾಕಷ್ಟು ಲಾಭಗಳಿವೆ. 3 ವರ್ಷಗಳಲ್ಲಿ ಹಾಕಿದ ಹಣ ಹಿಂದಿರುಗಿ ಬರುವುದು ನಿಶ್ಚಿತ ಎಂದರು. ಸಂಪನ್ಮೂಲ ವ್ಯಕ್ತಿ ಅರುಣಕುಮಾರ್ ಕಾಳುಮೆಣಸು ಬೆಳೆ ಬಗ್ಗೆ ಮಾಹಿತಿ ನೀಡಿದರು. ಗಾಯತ್ರಿ ಸ್ವಸಹಾಯ ಸಂಘದ ರಾಜೇಶ್, ಸುದೀಪ್ ಕೆ.ಎಲ್, ಕೆ.ಎನ್.ಸುಬ್ರಹ್ಮಣ್ಯ, ಗಿರೀಶ್‌ಜೇನಿ, ತಿಮ್ಮಪ್ಪರಾವ್, ರಾಘವೇಂದ್ರ, ಕೆ.ಗುರುರಾಜ್, ಧನಂಜಯ ಇದ್ದರು.


ಸಂದಲ್ ಉರುಸ್ ಶರೀಫ್ ಆಚರಣೆ

ಭದ್ರಾವತಿ:  ಪಟ್ಟಣದ ತರೀಕೆರೆ ರಸ್ತೆಯಲ್ಲಿರುವ ಹಜರತ್ ಸೈಯದ್ ಸಾದತ್ ರಹಮತುಲ್ಲಾ ಅಲ್ಫಾ ವಾರ್ಷಿಕೋತ್ಸವ ಪ್ರಯುಕ್ತ ಸಂದಲ್ ಉರುಸ್ ಶರೀಫ್ ಆಚರಿಸಲಾಯಿತು. ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಸಂದಲ್ ದರ್ಗಾ ಹಜರತ್ ಸೈಯದ್ ಸಾದತ್ ಸಂದಲ್ ಮೆರವಣಿಗೆ ಮುಖಾಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಪಟ್ಟಣದ ಎಲ್ಲಾ ದರ್ಗಾಗಳಿಗೆ ಭೇಟಿ ನೀಡಿ ಫತೇಹ ಸಲ್ಲಿಸಿ ಕೊನೆಯ ದರ್ಗಾ ಹಜರತ್ ಸೈಯದ್ ಸಾದತ್ ದರ್ಗಾ ತಲಪಿದ ನಂತರ ಪಟ್ಟಣದ ಸಕಲ ಜನರ ಶಾಂತಿ ಹಾಗೂ ನೆಮ್ಮದಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ದರ್ಗಾ ಸಮಿತಿ ಅಧ್ಯಕ್ಷ ರಹಮತುಲ್ಲಾ ಖಾನ್, ಉಪಾಧ್ಯಕ್ಷ ಮಹಮ್ಮದ್ ಮಕರಮ್, ಸೈಯದ್ ರಫಿ, ಯೂನಿಸ್ ಖಾನ್ ಹಾಗೂ ಕಾರ್ಯದರ್ಶಿ ರಿಜ್ವಾನ್ ಖಾನ್ ಮತ್ತು ಸಮಿತಿ ಸದಸ್ಯರು ಹಾಜರಿದ್ದರು. ಹಳೇನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್‌ಇನ್‌ಸ್ಪೆಕ್ಟರ್ ಜಯಪ್ಪ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement